ಧಾರವಾಡ –
ರಸ್ತೆಯಲ್ಲಿ ಅಡ್ಡ ಬಂದ ಮಹಿಳೆಯನ್ನು ತಪ್ಪಿಸಲು ಹೋಗಿ BRTS ಬ್ಯಾರಿಕೇಡ್ ಗೆ ಬುಲೆರೊ ವಾಹನವೊಂದು ಡಿಕ್ಕಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ.

ನಗರದ ಹುಬ್ಬಳ್ಳಿ ರಸ್ತೆಯಲ್ಲಿನ ಬಾಗಲಕೋಟೆ ಪೆಟ್ರೋಲ್ ಬಂಕ್ ಬಳಿ ಈ ಒಂದು ಅವಘಡ ನಡೆದಿದೆ. ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಬುಲೆರೊ ವಾಹನವೊಂದು BRTS ರಸ್ತೆಯಲ್ಲಿ ಬಂದಿದೆ.ಬಾಗಲಕೋಟ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದಂತೆ ಮಹಿಳೆಯೊಬ್ಬರು ಅಡ್ಡವಾಗಿ ಬಂದಿದ್ದಾರೆ.ಇನ್ನೇನು ಮಹಿಳೆಗೆ ಗಾಡಿ ಡಿಕ್ಕಿಯಾಗುತ್ತದೆ ಎಂದುಕೊಂಡ ಚಾಲಕ ಅವರನ್ನು ತಪ್ಪಿಸಲು ಹೋಗಿ BRTS ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಸಿನೆಮಾ ಸ್ಟೈಲ್ ನಂತೆ ಗಾಡಿ ಜಂಪ್ ಮಾಡಿಸಿಕೊಂಡು ಎಸ್ಕೇಪ್ ಆಗಿದ್ದಾನೆ.

ಇನ್ನೂ ವಿಷಯ ತಿಳಿದ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ASI ವಿರೇಶ ಬಳ್ಳಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು.

ಈ ಕುರಿತು ಸಿಸಿ ಟಿವಿ ಪರಿಶೀಲನೆ ಮಾಡುತ್ತಿದ್ದಾರೆ.ಒಟ್ಟಾರೆ ದೊಡ್ಡ ಪ್ರಮಾಣದ ಅವಘಡವೊಂದು ತಪ್ಪಿದಂತಾಗಿದೆ.