ಧಾರವಾಡ –
ವಿಶ್ವ ಆರೋಗ್ಯ ದಿನಾಚರಣೆಯನ್ನು ಧಾರವಾಡದಲ್ಲಿ ವಿಶೇಷವಾಗಿ ಆಚರಣೆ ಮಾಡಲಾಯಿತು.ಯಾವು ದೇ ಸಭೆ ಸಮಾರಂಭವನ್ನು ಮಾಡದೇ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಂಚಾರಿ ಪೊಲೀಸರು ವಿಶೇಷವಾಗಿ ವಿಶ್ವ ಆರೋಗ್ಯ ದಿನಾಚ ರಣೆಯನ್ನು ಆಚರಣೆ ಮಾಡಿದರು.

ಹೌದು ದಿನಾಚರಣೆ ನಗರದಲ್ಲಿ ಧಾರವಾಡ ಸಂಚಾರಿ ಪೊಲೀಸರು ಕೋವಿಡ್ ಲಸಿಕೆ ಕುರಿತಂತೆ ಜಾಗೃತಿ ಅಭಿಯಾನವನ್ನು ಮಾಡಿದರು. ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಇಲಾಖೆ,ಪೊಲೀಸ್ ಇಲಾಖೆ ಮತ್ತು ವಿವಿಧ ಜಿಲ್ಲಾ ಮಟ್ಟದ ಇಲಾಖೆಗಳ ಸಹಯೋಗದಲ್ಲಿ ಈ ಒಂದು ಅಭಿಯಾನವನ್ನು ಮಾಡಲಾಯಿತು.

ನಗರದ ಮಹಾನಗರ ಪಾಲಿಕೆಯ ವೃತ್ತದಿಂದ ಹಮ್ಮಿ ಕೊಂಡಿದ್ದ ಜಾಥಾಗೆ ಶಹರ ಪೊಲೀಸ್ ಠಾಣೆಯ ಇನಸ್ಪೇಕ್ಟರ್ ಚಾಲನೆ ನೀಡಿದರು.ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಾಗಿ ಸಾರ್ವಜನಿಕರಿಗೆ ಧಾರವಾಡ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ಗಳಾದ

ವಿರೇಶ ಬಳ್ಳಾರಿ,ಬಿ ವಿ ಘಾಳರಡ್ಡಿ, ಲಿಂಗರಾಜ ನಾಯಕ,ಬಸವರಾಜ ಗುರಿಕಾರ,ಸೇರಿದಂತೆ ಹಲವರು ಈ ಒಂದು ಜಾಥಾದಲ್ಲಿ ಪಾಲ್ಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕಿ ಕೋವಿಡ್ ಲಸಿಕೆ ಕುರಿತಂತೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಿ ಮಾಸ್ಕ್ ವಿತರಣೆ ಮಾಡಿದರು

ಈ ಒಂದು ಕಾರ್ಯಕ್ರಮದಲ್ಲಿ ಧಾರವಾಡ ಸಂಚಾರಿ ಪೊಲೀಸರೊಂದಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಆಶಾ ಕಾರ್ಯಕರ್ತೆ ಯರು ಸೇರಿದಂತೆ ಹಲವರು ಪಾಲ್ಗೊಂಡು ಜಾಗೃತಿ ಅಭಿಯಾನಕ್ಕೆ ಮೆರಗು ನೀಡಿದರು