ಹುಬ್ಬಳ್ಳಿ –
ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ವ್ಯಾಪಿ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಮೂರನೇಯ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಏನೇ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಸಾರಿಗೆ ನೌಕರರಿಲ್ಲ ಇನ್ನೂ ಸರ್ಕಾರ ಕೂಡಾ ಸಿಡಿದೆ ದ್ದಿದ್ದು ಈಗಾಗಲೇ ನೊಟೀಸ್ ನೀಡಿದರೂ ಕೂಡಾ ಸಾರಿಗೆ ನೌಕರರು ಮಾತ್ರ ಕಣ್ತೇರೆದು ನೋಡುತ್ತಿಲ್ಲ ತಲೆ ಕೆಡಿಸಿಕೊಳ್ಳು ತ್ತಿಲ್ಲ ಇದರಿಂದ ಸಿಡಿದೆದ್ದ ಇಲಾಖೆಯ ಅಧಿಕಾರಿಗಳು ಈಗ ಇಲಾಖೆಯ ಕ್ವಾಟರ್ಸ್ ಗಳಲ್ಲಿ ಇರುವ ಮನೆಗ ಳನ್ನು ಖಾಲಿ ಮಾಡುವಂತೆ 21 ಸಾರಿಗೆ ನೌಕರರಿಗೆ ನೊಟೀಸ್ ನೀಡಿದ್ದಾರೆ. ಮನೆ ಮನೆಗೆ ಹೋಗಿ ನೊಟೀಸ್ ನೀಡಿದ್ದಾರೆ. ಇನ್ನೂ ಇದರೊಂದಿಗೆ ಪರೀಕ್ಷಾ ಅವಧಿಯಲ್ಲಿರುವ 12 ಸಿಬ್ಬಂದಿಗಳಿಗೆ ಸೇವೆಯಿಂದ ವಜಾಗೊಳಿಸಲು ನೊಟೀಸ್ ನೀಡಿ ದ್ದಾರೆ. ಇಷ್ಟಾದರೂ ಕೂಡಾ ಯಾರು ಈ ಕುರಿತಂತೆ ತಲೆ ಕೆಡಿಸಿಕೊಂಡಿಲ್ಲ ಮತ್ತೆ ಪ್ರತಿಭಟನೆಯನ್ನು ಮುಂದುವರೆಸಿದ್ದು ಮುಂದೇನಾಗುತ್ತದೆ ಎಂಬುದ ನ್ನು ಕಾದು ನೋಡಬೇಕು.