ಧಾರವಾಡ –
ಯೋಗೀಶಗೌಡ ಕೊಲೆ ಕೇಸ್ ಪ್ರಕರಣದಲ್ಲಿ ತನಿಖಾಧಿಕಾರಿ ಚನ್ನಕೇಶವ ಟಿಂಗರಿಕರ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮತ್ತೇ ಮುಂದೂಡಿದೆ .ವಿಚಾರಣೆ ಮಾಡಿದ ನ್ಯಾಯವಾದಿಗಳು ಈ ಒಂದು ಜಾಮೀನು ಅರ್ಜಿಯ ವಿಚಾರಣೆಯನ್ನು ನ 30ಕ್ಕೆ ಮುಂದೂಡಿದ್ದಾರೆ.
ಕೆಳಗಿನ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಮಾಡಿತ್ತು. ಹೀಗಾಗಿ ಧಾರವಾಡ ಹೈಕೋಟ್‌ಗೆ ಚನ್ನಕೇಶವ ಟಿಂಗರಿಕರ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಮಾಡಿದ ನ್ಯಾಯಾವಾದಿಗಳು ಈ ಒಂದು ಅರ್ಜಿಯನ್ನು ನವಂಬರ್ 30 ಕ್ಕೇ ಮುಂದೂಡಿದ್ದಾರೆ.
ಇನ್ನೂ ನಿರೀಕ್ಷಣಾ ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಿದ ಸಿಬಿಐ ತಕರಾರು ಅರ್ಜಿ ಬಳಿಕ ಮತ್ತೆ ವಿಚಾರಣೆಗೆ ನವಂಬರ್ 30ಕ್ಕೆ ವಿಚಾರಣೆ ಮುಂದೂಡಲಾಯಿತು.