ಧಾರವಾಡ –
ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಚೆನ್ನಕೇಶವ ಟಿಂಗರಿಕರ್ ಗೆ ಕೊನೆಗೂ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಧಾರವಾಡ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಸಿಕ್ಕಿದೆ.ಇಂದು ವಾದ ವಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಜಾಮೀನು ಮಂಜೂರು ಮಾಡಿದ್ದಾರೆ.
ಇನ್ನೂ ಸಿಬಿಐ ನಿಂದ ಬಂಧನದ ಭೀತಿಯಲ್ಲಿದ್ದ ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರಿಕರ್ ಗೆ ರಿಲೀಫ್ ಸಿಕ್ಕಿದಂತಾಗಿದೆ ಇದರೊಂದಿಗೆ ಟಿಂಗರಿಕರ್ ಸಾಕ್ಷಿ ನಾಶದ ಆರೋಪ ಹೊತ್ತಿರೋ ಟಿಂಗರಿಕರ್ ಯೊಗೀಶಗೌಡ ಹತ್ಯೆಯ ತನಿಖಾಧಿಕಾರಿಯಾಗಿದ್ದರು. ಇನ್ಸ್ಪೆಕ್ಟರ್ ಟಿಂಗರಿಕರ್ ನವಂಬರ್ 9 ರಂದು ಸಲ್ಲಿಸಿದ್ದ ಅರ್ಜಿಯನ್ನು ಎರಡೂ ಕಡೆ ವಕೀಲರ ವಾದ ಆಲಿಸಿದ ನ್ಯಾಯಾಲಯ ಷರತ್ತುಗಳನ್ನು ವಿಧಿಸಿ, ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ.