ಕೋಳಿವಾಡ –
ಧಾರವಾಡ ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಅಧಿಕಾರ ಸ್ವೀಕಾರ ಮಾಡಿ ಆರೇಳು ತಿಂಗಳಾಗಿದೆ. ಕರೋನಾ ಮಹಾಮಾರಿಯ ನಡುವೆ ಜಿಲ್ಲಾಧಿಕಾರಿಯಾಗಿದ್ದ ದೀಪಾ ಚೋಳನ್ ವರ್ಗಾವಣೆಯಾದ್ರು ಇತ್ತ ಧಾರವಾಡ ಜಿಲ್ಲೆಗೆ ನಿತೀಶ್ ಕಲ್ಲನಗೌಡ ಪಾಟೀಲ್ ಹೊಸ ಜಿಲ್ಲಾಧಿಕಾರಿಯಾಗಿ ಬಂದ್ರು.
ಇನ್ನೂ ಜಿಲ್ಲಾಧಿಕಾರಿಯಾಗಿರುವ ನಿತೀಶ್ ಪಾಟೀಲ್ ಕುರಿತಂತೆ ನೊಡೋದಾದ್ರೆ ನಮ್ಮ ನಾಡಿನವರಾದ ಇವರು ಮೂಲತಃ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಕೆರೂಟಗಿ ಗ್ರಾಮದವರು.ಎಸ್ಎಸ್ಎಲ್ ಸಿ ವರೆಗೆ ವಿಜಯಪುರದಲ್ಲಿ ವ್ಯಾಸಂಗ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪಿಯುಸಿ, ಬಳಿಕ ಎನ್ಐಟಿ ಅಲಹಾಬಾದ್ ನಲ್ಲಿ ಬಿಇ (ಕಂಪ್ಯೂಟರ್ ಸೈನ್ಸ್) ಪದವಿ ಪಡೆದರು.ಕೆಲಕಾಲ ಸಾಫ್ಟ್ ವೇರ್ ಇಂಜಿನೀಯರ್ ಆಗಿ ಸೇವೆ ಸಲ್ಲಿಸಿದ ಬಳಿಕ 2012ರಲ್ಲಿ ಯುಪಿಎಸ್ ಸಿ ಯ ನಾಗರೀಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾದರು.
ಪ್ರೊಬೇಷನರಿ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ತಹಶೀಲ್ದಾರರಾಗಿ ನಂತರ ಶಿವಮೊಗ್ಗ ಜಿಲ್ಲೆಯ ಸಾಗರದ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ(ಸಿಇಒ) ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಬಳಿಕ ವಾಣಿಜ್ಯ ತೆರಿಗೆ ಇಲಾಖೆಯ ಅಪರ ಆಯುಕ್ತರಾಗಿ ಕಾರ್ಯನಿರ್ವಹಿಸಿ, ಇದೀಗ ಧಾರವಾಡ ಜಿಲ್ಲಾಧಿಕಾರಿಯಾಗಿ ಹುದ್ದೆ ಸ್ವೀಕರಿಸಿದ್ದಾರೆ ನಿತೀಶ್ ಪಾಟೀಲ್ ಸಾಹೇಬ್ರು. ಇದು ಇವರ ಬಯೋ ಡೇಟಾ ಆದರೆ ಇವರು ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ಒಂದೆಡೆಯಾದರೆ ಮತ್ತೊಂದು ಧಾರವಾಡ ಜಿಲ್ಲೆಯ ಅಳಿಯ ಎಂಬುದು ಮತ್ತೊಂದು ಹೆಮ್ಮೆ. ಹೌದು ಹಿರಿಯ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಧಾರವಾಡ ಜಿಲ್ಲೆಯ ಕೋಳಿವಾಡ ಗ್ರಾಮದವರು. ಅವರ ಮಗಳಾದ ಐಶ್ವರ್ಯ್ಯ ಅವರನ್ನು ನಿತೀಶ್ ಪಾಟೀಲ್ ಮದುವೆಯಾಗಿದ್ದಾರೆ.
ಕುಂದಗೋಳ ತಾಲ್ಲಾಕಿನ ಕೋಳಿವಾಡ ಗ್ರಾಮದ ಅಳಿಯರಾಗಿದ್ದಾರೆ ಧಾರವಾಡ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ , ಮದುವೆಯಾದ ಮೇಲೆ ರಾಜ್ಯದ ಮೂಲೆ ಮೂಲೆಗೂ ಸುತ್ತಾಡಿರುವ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ರು ಮೊದಲ ಬಾರಿಗೆ ಧಾರವಾಡ ಜಿಲ್ಲೆಗೆ ಬಂದಿದ್ದಾರೆ. ಅದು ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿ ಬಂದಿದ್ದು ಇಲ್ಲಿಗೆ ಬಂದ ಮೇಲೆ ಬಿಡುವಿಲ್ಲದ ಕರೋನಾ ಒಂದರ ಮೇಲೊಂದು ಕಾರ್ಯಕ್ರಮ ಸಭೆ ಸಮಾರಂಭ ಇವೆಲ್ಲವುಗಳ ನಡುವೆ ಮೊದಲ ಬಾರಿಗೆ ಇಂದು ಜಿಲ್ಲಾಧಿಕಾರಿ ತಮ್ಮ ಬೀಗರ ಊರಿಗೆ ಆಗಮಿಸಿದ್ದರು. ನವಲಗುಂದ ಮತ ಕ್ಷೇತ್ರದ ಕೋಳಿವಾಡ ಗ್ರಾಮದಲ್ಲಿ ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಒಂದು ಕಾರ್ಯಕ್ರಮದ ಪಾಲ್ಗೊಳ್ಳಲು ಮೊದಲ ಬಾರಿಗೆ ಕೋಳಿವಾಡ ಗ್ರಾಮಕ್ಕೇ ಹೋಗಿ ಶಾಸಕರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದರು.
ಮೊದಲ ಬಾರಿಗೆ ನಮ್ಮೂರಿಗೆ ಅಳಿಯ ಬಂದಿದ್ದಾರೆ ಎಂಬ ಸಂತೋಷ ಖುಷಿ ಗ್ರಾಮಸ್ಥರಲ್ಲಿ ಹಮ್ಮಿಕೊಂಡ ಎಲ್ಲಾ ಕಾರ್ಯಕ್ರಮ ಮುಗಿಯಿತು. ಇನ್ನೇನು ಬೀಗರ ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಮತ್ತೊಂದು ಕಾರ್ಯಕ್ರಮದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಬೀಗರ ಮತ್ತು ಪರಿಚಯದವರ ಮನೆಗೆ ಹೊಗದೇ ವಾಪಸ್ಸು ಧಾರವಾಡದತ್ತ ಪ್ರಯಾಣ ಬೆಳೆಸಿದ್ರು.
ಇತ್ತ ಮದುವೆಯಾದ ನಂತರ ಮೊದಲ ಬಾರಿಗೆ ಕಳಸದ ಸಾಹೇಬ್ರ ಅಳಿಯ ನಮ್ಮೂರಿಗೆ ಬಂದಿದ್ದಾರೆಂದು ಖುಷಿಯಿಂದ ಬಂದು ಜಿಲ್ಲಾಧಿಕಾರಿಗಳನ್ನು ನೋಡಿ ಕೆಲ ಸಮಸ್ಯೆಗಳನ್ನು ಹೇಳಿಕೊಂಡು ಮನೆಗೆ ಬರಮಾಡಿಕೊಳ್ಳಬೇಕೆಂಬ ಆಸೆಯನ್ನಿಟ್ಟುಕೊಂಡಿದ್ದ ಗ್ರಾಮಾಸ್ಥರು ನಿರಾಸೆಯಿಂದ ಊರಿನ ಅಳಿಯರನ್ನು ಧಾರವಾಡ ಜಿಲ್ಲಾಧಿಕಾರಿಯನ್ನು ಕಳುಹಿಸಿಕೊಟ್ಟರು.