This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ಧಾರವಾಡದ ಕಂಚಿನ ಕಂಠದ ಗಾಯಕ ಬಸಲಿಂಗಯ್ಯ ಹಿರೇಮಠ ಇನ್ನೂ ನೆನಪು ಮಾತ್ರ – ಬೆಳಗಿನ ಜಾವ ನಿಧನರಾದ ಕಲಾವಿದನಿಗೆ ಭಾವಪೂರ್ಣ ನಮನ ಸಂತಾಪ

WhatsApp Group Join Now
Telegram Group Join Now

ಧಾರವಾಡ –

ಉತ್ತರ ಕರ್ನಾಟಕದ ಕಂಚಿನ ಕಂಠದ ಜಾನಪದ ಕಲಾವಿದ ಧಾರವಾಡದ ಬಸಲಿಂಗಯ್ಯ ಹಿರೇಮಠ ನಿಧನರಾಗಿದ್ದಾರೆ. ಹೌದು ಬೆಳಗಿನ ಜಾವ ಮನೆಯಲ್ಲಿ ರಕ್ತದ ಒತ್ತಡ ಕಡಿಮೆ ಯಾಗಿ ಕುಸಿದು ಬಿದ್ದ ಇವರು ಇನ್ನೇನು ಚಿಕಿತ್ಸೆಗೆ ಕರೆದು ಕೊಂಡು ಹೋಗಬೇಕು ಎನ್ನುವಷ್ಟರಲ್ಲಿಯೇ ನಿಧನರಾಗಿ ದ್ದಾರೆ

ಹಿರಿಯ ಶ್ರೇಷ್ಠ ಜಾನಪದ ಸಂಗೀತ ಕಲಾವಿದ ಹುಲಿಯೋ ಹುಟ್ಟಿತ್ತ ಕಿತ್ತೂರ ನಾಡಗ ಹಾಡಿನಿಂದ ಜನಪ್ರಿಯರಾದ ಹಾಗೂ ನೀನಾಸಂ ಪದವೀಧರ ಬೀ.ವಿ.ಕಾರಂತ ರ ಜೊತೆ ಸಂಗೀತ ಸಯೋಜಕರಾಗಿ ಸೇವೆ ಸಲ್ಲಿಸಿದ ಇದರೊಂದಿಗೆ ಇನ್ನೂ ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾಧನೆ ಮಾಡಿ ಹೆಸರಾಗಿರುವ ಬಸಲಿಂಗಯ್ಯ ಹಿರೇಮಠ ಇನ್ನಿಲ್ಲ ಎನ್ನುವುದು ಬಹಳ ಖೇದಕರ ಸಂಗತಿ.

ಜಾನಪದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಸಾವಿನಿಂದಾಗಿ ಜಾನಪದ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಶ್ರೀ ಕೃಷ್ಣ ಪಾರಿಜಾತ ನಾಟಕವನ್ನು ಅಂತಾರಾ ಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಹಿರಿಯ ಜಾನಪ ದ ಕಲಾವಿದ ಗಾಯಕ ಬಸವಲಿಂಗಯ್ಯ ಹಿರೇಮಠ ಅವರಿ ಗೆ ಸಲ್ಲುತ್ತದೆ ಪತ್ನಿ,ಪುತ್ರ ಸೇರಿದಂತೆ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿ ಸಲಾಗಿತ್ತು.ಮೂಲತಃ ಬೆಳಗಾವಿ ಜಿಲ್ಲೆಯ ಬೇಲೂರಿನವ ರಾದ ಬಸವಲಿಂಗಯ್ಯ ನೀನಾಸಂ ಶಿಕ್ಷಣ ಪಡೆದು, ಸುಗಮ ಸಂಗೀತ ಕ್ಷೇತ್ರದಲ್ಲಿ ಗಾಯಕರಾಗಿ ಹೆಸರು ಮಾಡಿದರು.ದೊಡ್ಡಾಟ, ಸಣ್ಣಾಟ, ಪಾರಿಜಾತ ನಾಟಕ ಗಳನ್ನು ಆಧುನಿಕ ರಂಗಭೂಮಿಗೆ ಪರಿಚಯಿಸಿ ಅವುಗ ಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಅವುಗ ಳನ್ನು ಹೊಸ ಪೀಳಿಗೆಗೆ ಪರಿಚಯಿಸಿದರು.ಕುಲಗೋಡು ತಮ್ಮಣ್ಣ ವಿರಚಿತ 12 ಗಂಟೆಗಳ ಅವಧಿಯ ಶ್ರೀ ಕೃಷ್ಣ ಪಾರಿಜಾತ ವನ್ನು ಮೂರು ಗಂಟೆಯಲ್ಲಿ ಪ್ರೇಕ್ಷಕರ ಮನ ಮುಟ್ಟುವಂತೆ ಮಾಡಿ ಸಾವಿರಕ್ಕೂ ಅಧಿಕ ಪ್ರಯೋಗದಿಂದ ಜನ ಮಾನಸದಲ್ಲಿ ಛಾಪು ಮೂಡಿಸಿದ್ದರು.ಜಾನಪದ ಸಂಶೋಧನಾ ಸಂಸ್ಥೆ ಮೂಲಕ ಯುವ ಕಲಾವಿದರು, ಯುವ ಸಮೂಹದ ಮುಂದೆ ಜಾನಪದ ಕಲಾ ತರಬೇತಿ ಮಾಡಿ ಸೈ ಎನಿಸಿಕೊಂಡ ಬಸವಲಿಂಗಯ್ಯ ಅವರ ಕಂಚಿನ‌ ಕಂಠದ ಹಾಡುಗಾರಿಕೆಗೆ ಎಲ್ಲರೂ ತಲೆತೂಗುತ್ತಿದ್ದರು

ಅಮೇರಿಕಾ, ಇಂಗ್ಲೆಂಡ್, ದುಬೈ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳಲ್ಲಿ ಕೂಡ ಕೃಷ್ಣ ಪಾರಿಜಾತ ಸಣ್ಣಾಟ ಪ್ರದರ್ಶನ ನೀಡಿದ್ದ ಅವರ ಕಲಾ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಬಿರುದು ಸನ್ಮಾನಗಳು ಒಲಿದು ಬಂದಿದ್ದವು.ಅವರ ಜಾನಪದ ಗಾಯನ ಕಾರ್ಯಕ್ರಮಗಳು ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾಗಿದ್ದವು.ಮೃತರಾದ ಇವರ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಅದರ ಲ್ಲೂ ಜಿಲ್ಲೆಯ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ,ಆಪ್ತ ಸಹಾಯಕರಾದ ಮಲ್ಲಿಕಾರ್ಜುನ ಪಾಟೀಲ, ಸಟಿವರಾದ ಶಂಕರ ಪಾಟೀಲ ಮುನೇನಕೊಪ್ಪ,ಶಾಸಕರಾದ ಅರವಿಂದ ಬೆಲ್ಲದ,ಅಮೃತ ದೇಸಾಯಿ,ಮಕ್ಕಳ ಹಿರಿಯ ಸಾಹಿತಿ ಶಂಕರ ಹಲಗತ್ತಿ,ತಬಲಾ ವಾದಕ ಅನಿಲ ಮೇತ್ರಿ,ಎಲ್ ಐ ಲಕ್ಮಮ್ಮನವರ,ಹಿರಿಯ ಪತ್ರಕರ್ತ ಬಸವರಾಜ ಹೊಂಗಲ, ಸಂತೋಷ ಮಹಾಲೆ,ಡಿ ಎಮ್ ಹಿರೇಮಠ.ಈರೇಶ ಅಂಚಟಗೇರಿ,ಮಹೇಶ್ ಶೆಟ್ಟಿ,ಗುರು ತಿಗಡಿ,ಸೇರಿದಂತೆ ಹಲವರು ಭಾವಪೂರ್ಣ ಸಂತಾಪವನ್ನು ಸೂಚಿಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk