This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

State News

ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಎಚ್ಚರಿಕೆ ಸಂದೇಶ ನೀಡಿದ ಬಸವರಾಜ ಕೋರವರ,ಗುರುನಾಥ್ ಗೌಡರ – ಇದೇ ಮುಂದುವರಿದರೆ ನ್ಯಾಯಾಲಯಕ್ಕೆ ಮೊರೆ ಹೋಗುತ್ತೆವೆ ಎಂದ ನಾಯಕರು…..ಶಾಸಕ ಅಮೃತ ದೇಸಾಯಿ ಅವರ ದಾರಿ ಬೇರೆ ನಮ್ಮ ದಾರಿಯೇ ಬೇರೆ…..

ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಎಚ್ಚರಿಕೆ ಸಂದೇಶ ನೀಡಿದ ಬಸವರಾಜ ಕೋರವರ,ಗುರುನಾಥ್ ಗೌಡರ – ಇದೇ ಮುಂದುವರಿದರೆ ನ್ಯಾಯಾಲಯಕ್ಕೆ ಮೊರೆ ಹೋಗುತ್ತೆವೆ ಎಂದ ನಾಯಕರು…..ಶಾಸಕ ಅಮೃತ ದೇಸಾಯಿ ಅವರ ದಾರಿ ಬೇರೆ ನಮ್ಮ ದಾರಿಯೇ ಬೇರೆ…..
WhatsApp Group Join Now
Telegram Group Join Now

ಧಾರವಾಡ

ಮಾಜಿ ಸಚಿವ ವಿನಯ ಕುಲಕರ್ಣಿ ಆರೋಪ ಮುಕ್ತವಾಗಿ ಹೊರಗೆ ಬರಲಿ ಆರೋಪ ಇರುವ ವರೆಗೆ ಸಾಕ್ಷಿಗಳ ಮೇಲೆ‌‌ ಒತ್ತಡ ಹಾಕಬೇಡಿ ಬಸವ ರಾಜ ಕೋರವರ – ಶಾಸಕ ಅಮೃತ ದೇಸಾಯಿ ನನ್ನ ಗೆಳೆಯರು ಆವರ ದಾರಿಯೇ ಬೇರೆ ನಮ್ಮ ದಾರಿಯೇ ಬೇರೆ ಎಂದ ಬಸವರಾಜ ಕೋರವರ

ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಕಿತ್ತೂರಿನಲ್ಲಿ ನಡೆದ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮೇಲೆ ವೇದಿಕೆಯ ಕಾರ್ಯಕ್ರಮ ಕುರಿತಂತೆ ಧಾರವಾಡ ದಲ್ಲಿ ಯೋಗಿಶಗೌಡ ಸಹೋದರ ಗುರುನಾಥ ಗೌಡ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಗಿಶಗೌಡ ಬೆಳೆಯುತ್ತಾರೆ ಎಂದು ಹೇಳಿ ವಿನಯ ಕುಲಕರ್ಣಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದುಯೋಗಿಶಗೌಡ ಕೊಲೆ ಯಾಕೆ ಆಗಿದೆ ಎಂದು ಸಿಬಿಐ ಕೊಟ್ಟ ನಂತರ ಪ್ರಕರಣ ಹೊರಗೆ ಬಂದಿತ್ತು ಆಗ 2020 ರಲ್ಲಿ ವಿನಯ ಕುಲಕರ್ಣಿಗೆ ಬಂಧಿಸಿದ್ದ ಸಿಬಿಐ ಆದರೆ ಉದ್ದೇಶಪೂರ್ವಕ ವಾಗಿ ನನ್ನನ್ನ ಟಾರ್ಗೆಟ್ ಮಾಡುತಿದ್ದಾರೆ ಎಂದು ವಿನಯ ಕುಲಕರ್ಣಿ ಹೇಳ್ತಾರೆ.

ರಾಜಕೀಯದಿಂದ ಮುಗಿಸಲು ಈ ರೀತಿ ಮಾಡು ತ್ತಿದ್ದಾರೆ ದ್ದಾರೆ ಎಂದು‌ದು ವಿನಯ ಕುಲಕರ್ಣಿ ಹೇಳುತ್ತಿದ್ದಾರೆ.ನಾನು ಕೂಡಾ ಬಿಜೆಪಿ ಕಾರ್ಯ ಕರ್ತ ಸಿದ್ದರಾಮಯ್ಯ ಸಿಎಂ ಇದ್ದಾಗ ಈ ಪ್ರಕರಣ ಸಿಬಿಐಗೆ ಕೊಡಲು ಮನವಿ ಮಾಡಿದ್ದೆವು ಅವರು ಕೊಡಲಿಲ್ಲ ನಾವು ಯಡಿಯೂರಪ್ಪ ಅವರಿಗೆ ಈ ಬಗ್ಗೆ‌ ಮನವಿ ಮಾಡಿದ್ದೆವು ಅವರು ಸಿಎಂ ಆದಾಗ ಸಿಬಿಐಗೆ ಕೊಟ್ಟರು ಆಗ ಸಿಬಿಐ ೪೦೦ ಜನರಿಗೆ ವಿಚಾರಣೆ ಮಾಡಿದ ನಂತರ ವಿನಯಕುಲಕರ್ಣಿಗೆ ಬಂಧಿಸಿದರೆಂದರು.

ಇನ್ನೂ ಕೆಲ ಸ್ವಾಮೀಜಿಗಳು ಉದ್ದೇಶ ಪೂರ್ವ ಕವಾಗಿ ವಿನಯ ಕುಲಕರ್ಣಿಗೆ ಸಿಲುಕಿಸಲಾಗುತಿದೆ ಅಂತಾರೆ ವೇದಿಕೆ‌ ಮೇಲೆ ಸ್ವಾಮೀಜಿಗಳು ವಿನಯ ಕೊಲೆ ಆರೋಪಿ ಅಲ್ಲ ಎಂದು ಹೇಳ್ತಾರೆ ನಾವು ಅದೇ ಧರ್ಮದಿಂದ ಬಂದವರು ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮೀಜಿ ಯೋಗಿಶಗೌಡ ಜಿಪಂ ಸದಸ್ಯ ಇದ್ದಾಗ ಹಲವಾರು ಬಾರಿ ಬಂದಿದ್ದರು.ಇನ್ನೂ ಯೋಗಿಶಗೌಡ ಕೊಲೆ ನಂತರ ಒಮ್ಮೆಯೂ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ ನಾವು ಕೂಡಾ ಮಠಕ್ಕೆ ನಡೆದು ಕೊಂಡು ಬಂದಿದ್ದೆವೆ

ಸ್ವಾಮೀಜಿಗಳು ವಿನಯ ಕುಲಕರ್ಣಿ ಪ್ರಭಾವಿಗಳಿ ದ್ದಾರೆ ಎಂದು ಅವರು ಶ್ರೀಮಂತ‌ ಇದ್ದಾರೆ ಎಂದು ಬೆನ್ನು ಹತ್ತಬಾರದು ಎಂದರು.ಇನ್ನೂ ವಿನಯ ಕುಲಕರ್ಣಿ ಎರಡು ವರ್ಷ ಜಾನುವಾರು ನೋಡಿಲ್ಲ ಅಂತಾರೆ ನಮ್ಮ ತಾಯಿ ನಮ್ಮ ತಮ್ಮ ನಿಗೆ ೪೦ ವರ್ಷ ಸಾಕಿದ್ದಾರೆ ಅವರಿಗೆ ಎಷ್ಟು ನೊವು‌ ಆಗಿರಬೇಕು ಅವರು ಆರೋಪ‌ ಮುಕ್ತ ಆದ ನಂತರ ಅವರು ಧಾರವಾಡದಲ್ಲೇ ಬಂದು ತಮ್ಮ ಜನ್ಮದಿನ ಆಚರಣೆ ಮಾಡಿಕೊಳ್ಳಬಹುದು ಆದರೆ ಎಲ್ಲೋ ಹೋಗಿ ವೇದಿಕೆ ಮಾಡಿಕೊಂಡು ಸಾಕ್ಷಿಗಳ ಮೇಲೆ  ಪ್ರಭಾವ ಬಿರುವದು ಮಾಡಬಾ ರದು ಎಂದು ಒತ್ತಾಯವನ್ನು ಮಾಡಿದರು.

ಇನ್ನೂ ಇದೇ ವೇಳೆ ಕೊಲೆಯಾದ ಯೋಗಿಶಗೌಡ ಗೆಳೆಯ ಬಸವರಾಜ್ ಕೊರವರ ಮಾತನಾಡಿ ಸಿದ್ದರಾಮಯ್ಯ ದೊಡ್ಡ ನಾಯಕರು ಹಾಗೂ ಮಠಾಧೀಶರು ಬಂದು ನಾವು ನಿಮ್ಮ ಜೊತೆ ಇದ್ದೆವೆ ಮುನ್ನುಗ್ಗಿ ಎಂದು ಹೇಳ್ತಾರೆ ಇವು ಸಾಕ್ಷಿಗಳ ಮೇಲೆ ಪರೋಕ್ಷವಾಗಿ ಒತ್ತಡ ಹೇರಿದಂತೆ ಆಗ ಲಿದೆ ನನ್ನಂತ ಜನಸಾಮಾನ್ಯರು ಅದರಲ್ಲಿ ಸಾಕ್ಷಿ ಇದ್ದಾರೆ ವಿನಯ ಮೇಲೆ ಸಾಕ್ಷಿ ನಾಶದ ಪ್ರಕರಣ ದಾಖಲಾಗಿದೆ.ಇವರು ಎಲ್ಲೆಲ್ಲಿ ಅವರು ಸಾಕ್ಷಿಗಳಿಗೆ ಒತ್ತಡ ಹಾಕಿದ್ದಾರೆ ಎಂದು ೧೦ ಸಾವಿರ ಪುಟದ ಚಾರ್ಜಸೀಟ್ ನಲ್ಲಿದೆ

ವಿನಯ ಕುಲಕರ್ಣಿ ಪ್ರಭಾವಿ ರಾಜಕಾರಣಿ ಅವರ ಬಳಿ ಹಣ ಬಲ ತೊಳ್ಬಲ ಇದೆ ಮಠಾಧೀಶರು ಇದ್ದಾರೆ ಎಂದು ಸಾಕ್ಷಿಗಳ‌ ಮೇಲೆ‌ ಪ್ರಭಾವ‌ ಬೀರ ಬಹುದು ವಿನಯ ರಾಜಕೀಯವಾಗಿ‌ ಬೆಳಯು ತ್ತಾರೆ ಬೆಳೆಯಲಿ ಚುನಾವಣೆಗೆ‌ ನಿಲ್ಲಲಿ, ನಮ್ಮ ಅಭ್ಯಂತರ ಇಲ್ಲಾ ಅದು ಅವರ ಹಕ್ಕು ಆದರೆ ನೀವು ನಿಮ್ಮ ರಾಜಕೀಯ ವೇದಿಕೆಗಳಲ್ಲಿ ನಮ್ಮ ಸಾಕ್ಷಿಗಳ ಮೇಲೆ ಒತ್ತಡ ಹಾಕುವಂತೆ ಮಾಡ ಬೇಡಿ.

೨೦೧೬ ರಿಂದ ೧೮ ರವರೆಗೆ ಸಿದ್ಧರಾಮಯ್ಯ ಸಿಎಂ ಆಗಿದ್ದರು, ನಾವು ಆಗ ಮೂರು ಬಾರಿ ಮನವಿ ಮಾಡಿದ್ದೆವು ಅವರು ಅದಕ್ಕೆ ಸೊಪ್ಪು ಹಾಕಲಿಲ್ಲಾ ಇದು ಭೂವಿವಾದದ ಪ್ರಕರಣ ಎಂದು ಹೇಳುತ್ತಾ ಬಂದರು ಸಿದ್ದರಾಮಯ್ಯ ಮೊದಲಿನಿಂದಲೂ ವಿನಯ ಪರ ನಿಂತಿದ್ದಾರೆ ವಿನಯ ಅಪರಾಧಿ ಎಂದು ನಾವು ಹೇಳಲ್ಲ ಅವರು ಆರೋಪ ಮುಕ್ತವಾಗಿ ಹೊರಗೆ ಬರಲಿ, ನಮಗೆ ಸಂತೋಷ ಇದೆ, ಆರೋಪ ಇರುವವರೆಗೆ ಸಾಕ್ಷಿಗಳ ಮೇಲೆ‌‌ ಒತ್ತಡ ಹಾಕಬೇಡಿ ಎಂದು ಒತ್ತಾಯವನ್ನು ಮಾಡಿದರು.

ವೇದಿಕೆ‌ ಮೇಲೆ‌ ನಿಂತು ಮಾತನಾಡಿ ಪರೋಕ್ಷ ವಾಗಿ ಸಾಕ್ಷಿಗಳ‌ ಮೇಲೆ‌ ಒತ್ತಾಡ ಹಾಕಿದಂತೆ ಆಗಲಿದೆ ಅವರು ೧೦ ತಿಂಗಳ ಕಾಲ ಜೈಲಿನಲ್ಲಿ ಇದ್ದರು, ಹೊರಗೆ ಬಂದರು, ಅವರ ಕುಟುಂಬದ ಜೊತೆ ಅವರು ಚನ್ನಾಗಿರಲಿ ನಮಗೆ ಅಭ್ಯಂತರ ಇಲ್ಲಾ ಮಾನವಿಯ ಹಕ್ಕನ್ನ ನ್ಯಾಯಾಲಯ ಕಾಪಾಡಬೇಕಾಗುತ್ತೆ

ಅವರು ರಾಜಕೀಯನೂ ಮಾಡಲಿ ಅವರು ಇದನ್ನೇ‌ ಮುಂದುವರೆಸಿದರೆ ನಾವು ಅನಿ ವಾರ್ಯವಾಗಿ‌ ನ್ಯಾಯಾಲಯದ ಮೊರೆ ಹೋಗ್ತೆವೆ ಎಂದರು.ಇನ್ನೂ ಧಾರವಾಡದಲ್ಲಿ ಗುಂಡಾ ಪ್ರವೃತ್ತಿ ಬೆಳೆಯುತ್ತಿದೆ ಎಂದು ಹಾಗೂ ಜನ ಪ್ರತಿನಿಧಿಗಳು ಕೊಲೆ ಆಗುತಿದ್ದಾರೆ ಎಂದರೆ ಪೊಲೀಸ್ ವ್ಯವಸ್ಥೆ ಎಲ್ಲಿಗೆ ಬಂದಿದೆ ಎಂದು ನಾವು ಹೋರಾಟ ಮಾಡಿದ್ದೆವೆ ನಾವು ಇಲ್ಲಿ ಯಾರ ಪರ ಬ್ಯಾಟ್ ಮಾಡಲು ಬಂದಿಲ್ಲ ವಿನಯ ಕುಲಕರ್ಣಿ ಸಾಕ್ಷಿಗಳ ಮೇಲೆ ಒತ್ತಡ ಹಾಕಿದ್ದಕ್ಕೆ ಜೈಲಿಗೆ ಹೋಗಿದ್ದು ಮತ್ತೇ ಅವರು ಅದನ್ನು ಮಾಡಬಾರದು ಇನ್ನು ಶಾಸಕ ಅಮೃತ‌ ದೇಸಾಯಿ ನನ್ನ ಸ್ನೇಹಿತ ರಾಜಕೀಯವಾಗಿ ನಾನು ಅವರ ಜೊತೆ ಇಲ್ಲಾ ಅವರ ದಾರಿ ಬೇರೆ ನಮ್ಮ ದಾರಿಯೆ ಬೇರೆ ಎಂದರು.

 

 

ಇನ್ನೂ ಪ್ರತಿ ಬಾರಿ ಒಬ್ಬೊಬ್ಬ ಆರೋಪಿ ನ್ಯಾಯಾ ಲಯಕ್ಕೆ ಅರ್ಜಿ ಹಾಕುತಿದ್ದಾರೆ ವಿನಯ ಕುಲಕರ್ಣಿ ನ್ಯಾಯಾಲಯದಲ್ಲಿ ಕೆಸ್‌ ಮುಗಿಸಿ ಕೊಂಡು ತಪ್ಪಿತಸ್ಥ ಅಲ್ಲ ಎಂದು ಹೊರಗೆ ಬರಲಿ ಸಿಬಿಐ ಅವರು‌ ವಿನಯ ಕುಲಕರ್ಣಿಗೆ ಜೈಲಿಗೆ ಹಾಕ್ತಾರೆ ಎಂದರೆ ಅವರಿಗೆ ಅಂಥ ಸಾಕ್ಷಿ ಸಿಕ್ಕಿರಲೇ ಬೇಕು ಎಲ್ಲ ಸಾಕ್ಷಾಧಾರದ ಮಾಹಿತಿ ಚಾರ್ಜ್ ಶೀಟ್ ನಲ್ಲಿ ಇವೆ

ಕೊಲೆಯಾದ ಯೋಗಿಶಗೌಡ ಪಂಚಮಸಾಲಿ ಸಮಾಜದವರಿದ್ದರು ಈ ಪ್ರಕರಣದಲ್ಲಿ ಪೊಲೀಸ್ ಆಯುಕ್ತ ಕೂಡಾ ಬರಬೇಕಿತ್ತು ಅವರು ಒಬ್ಬರು ಬಚಾವ್ ಆಗಿದ್ದಾರೆ ನಾವು‌ ಈ ಬಗ್ಗೆ ಕೊರ್ಟ್ ಮೊರೆ‌ ಹೋಗಬೇಕು ಎಂದಿದ್ದೆವೆ, ಆಗಿನ ಪೊಲೀಸ್ ಆಯುಕ್ತ ಸೇರಿ ಹಲವು ಪೊಲೀಸ್ ಅಧಿಕಾರಿಗಳು ಆರೋಪಿ ಆಗಿದ್ದಾರೆ ಸಿಬಿಐ ಯಾವಾಗಲೂ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಬಹುದು ಎಂದರು.

 

ಸುದ್ದಿ ಸಂತೆ ನ್ಯೂಸ್ ಡೆಸ್ಕ್


Google News

 

 

WhatsApp Group Join Now
Telegram Group Join Now
Suddi Sante Desk