ಧಾರವಾಡ –
ಬಸವರಾಜ ಮಲಕಾರಿಗೆ ಪಕ್ಷದಲ್ಲಿ ಜವಾಬ್ದಾರಿ ಹುದ್ದೆಯನ್ನ ನೀಡಿದ ಹೈಕಮಾಂಡ್ – ಅಧ್ಯಕ್ಷರಿಗಿ ಹುದ್ದೆಯ ಆದೇಶ ನೀಡಿದ ಸಚಿವ ಮಧು ಬಂಗಾರಪ್ಪ ಸಾಕ್ಷಿಯಾದ್ರು ನಾಗರಾಜ ಗೌರಿ, ಹೇಮಂತ್,ಮನೋಜ್ ಸಂಗೊಳ್ಳಿ ಆಂಡ್ ಟೀಮ್
ಯುವ ಮುಖಂಡ ಬಸವರಾಜ ಮಲಕಾರಿ ಮತ್ತೆ ಕಾಂಗ್ರೇಸ್ ಪಕ್ಷದ ಗೂಡಿಗೆ ಸೇರಿಕೊಂಡಿದ್ದಾರೆ. ಕೆಲವೊಂದಿಷ್ಟು ವಿಚಾರದಲ್ಲಿ ಅಸಮಾಧಾನ ಗೊಂಡಿದ್ದ ಇವರು ಪಕ್ಷದಿಂದ ಹೊರಗೆ ಹೋಗಿ ದ್ದರು ನಂತರ ನಡೆದ ಬೆಳವಣಿಗೆಯಿಂದಾಗಿ ಮತ್ತೆ ಇತ್ತೀಚಿಗಷ್ಟೇ ಮರಳಿ ಕಾಂಗ್ರೇಸ್ ಪಕ್ಷಕ್ಕೆ ಸೇರಿ ಕೊಂಡ ಬೆನ್ನಲ್ಲೇ ಇವರಿಗೆ ಪಕ್ಷದ ಹೈಕಮಾಂಡ್ ಮಹತ್ವದ ಹುದ್ದೆಯನ್ನು ನೀಡಿದೆ.
ಹೌದು ರಾಜಕೀಯ ಜೀವನದ ಉದ್ದಕ್ಕೂ ಕಾಂಗ್ರೇಸ್ ಪಕ್ಷದ ಸಂಘಟನೆ ಹೋರಾಟ ಮಾಡುತ್ತಾ ಪಕ್ಷದ ಬೆಳವಣಿಗೆಗೆ ಹಗಲಿರುಳು ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ಇವರನ್ನು ಹಿಂದುಳಿದ ವರ್ಗಗಳ ವಿಭಾಗದ ಹುಬ್ಬಳ್ಳಿ ಧಾರವಾಡ ಜಿಲ್ಲಾ ಅಧ್ಯಕ್ಷ ರನ್ನಾಗಿ ನೇಮಕಾತಿ ಮಾಡಲಾಗಿದೆ.ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ ಸೂಚನೆಯ ಹಿನ್ನಲೆಯಲ್ಲಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಧ್ಯಕ್ಷ ಮಧು ಬಂಗಾರಪ್ಪ ಅವರು ಬಸವ ರಾಜ ಮಲಕಾರಿ ಅವರನ್ನು ನೇಮಕಾತಿ ಮಾಡಿದ್ದಾರೆ.
ಈ ಹಿಂದೆ ಕೂಡಾ ಪಕ್ಷದಲ್ಲಿ ಬೇರೆ ಬೇರೆ ಜವಾಬ್ದಾ ರಿಗಳನ್ನು ಇವರಿಗೆ ನೀಡಲಾಗಿತ್ತು ಸಧ್ಯ ಮತ್ತೆ ಇವರಿಗೆ ಹುಬ್ಬಳ್ಳಿ ಧಾರವಾಡ ಜಿಲ್ಲಾ ಅಧ್ಯಕ್ಷ ಹುದ್ದೆಯನ್ನು ನೀಡಿ ಆದೇಶದ ಪ್ರತಿಯನ್ನು ಸಚಿವ ಮಧು ಬಂಗಾರಪ್ಪ ಅವರು ನೀಡಿ ಶುಭ ಹಾರೈಸಿ ದರು.ಈ ಒಂದು ಸಮಯದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರಾದ ನಾಗರಾಜ ಗೌರಿ,ಹೇಮಂತ್ ಗುರ್ಲಹೊಸೂರು,ಮನೋಜ್ ಸಂಗೊಳ್ಳಿ, ಷಣ್ಮುಖ ಬೆಟಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..