ಧಾರವಾಡ
ಮಾಜಿ ಸಚಿವ ಸೋದರ ಮಾವನನ್ನು ಶಕುನಿಗೆ ಹೋಲಿಸಿದ ಬಸವರಾಜ ಮುತ್ತಗಿ. ಮಹಾಭಾರತದಲ್ಲಿ ಶಕುನಿ ಹೇಗೋ ಇಲ್ಲಿ ಚಂದುಮಾಮ್ ಹಾಗೇ ಎಂದು ಒಂದೊಂದು ಸತ್ಯವನ್ನು ಬಹಿರಂಗವಾಗಿ ಬಿಚ್ಚಿಡುತ್ತಿರುವ ಬಸವರಾಜ್ ಮುತ್ತಗಿ.

ಹೌದು ಯೊಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ, ಅಕ್ರಮ ಶಸ್ತ್ರಾಸ್ತ್ರ ಸಾಗಾಟದ ಆರೋಪದ ಮೇಲೆ ಸದ್ಯ ಸಿಬಿಐ ಕಸ್ಟಡಿಗೆ ಒಳಗಾಗಿರುವ ಮಾಜಿ ಸಚಿವ ಸೋದರ ಮಾವನನ್ನು, ಈಗ ಕೊಲೆಯ ಪ್ರಮುಖ ಆರೋಪಿಯಾಗಿರುವ ಬಸವರಾಜ್ ಮುತ್ತಗಿ ಚಂದ್ರಶೇಖರ ಇಂಡಿ ಅಲಿಯಾಸ್ ಚಂದು ಮಾಮರನ್ನು ಶಕುನಿಗೆ ಹೋಲಿಸಿದ್ದಾರೆ.

ಮತ್ತೆ ಉಪನಗರ ಠಾಣೆಯಲ್ಲಿ ಸಿಬಿಐ ವಿಚಾರಣೆಗೆ ಹಾಜರಾದ ಬಸವರಾಜ ಮುತ್ತಗಿ ಮಾತನಾಡಿ ಪ್ರತಿಕ್ರಿಯೆ ನೀಡಿದರು. ಮಾಜಿ ಸಚಿವ ಸೋದರ ಮಾವನನ್ನು ಶುಕುನಿಗೆ ಹೋಲಿಸಿದ್ದಾರೆ, ನನ್ನ ಹತ್ಯೆಗೆ ಸಂಚು ರೂಪಿಸಿದ ವಿಷಯವೇ ಇನ್ನೂ ನನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲಾ, ಒಬ್ಬಬ್ಬರಿಗೊಂದು ವಿಕ್ ನೆಸ್ ಇರುತ್ತದೆ.
ಅದರಲ್ಲಿ ನಾವು ಭಾವನೆಗಳ ಮೇಲೆ ಬದುಕು ಸಾಗಿಸುವವರು. ಕೇಲವರಿಗೆ ಚಾಡಿಕೇಳುವ ವಿಕ್ನೆಸ್ ಇರುತ್ತದೆ, ಹಾಗೇನಾದರೂ ಇಲ್ಲಿ ಆಗಿರಬಹುದು ಅಂದಕೊಳ್ಳುತ್ತಿದ್ದೇನೆ, ವಿಚಾರಣೆ ವಿಷಯಗಳನ್ನು ಬಹಿರಂಗವಾಗಿ ಮಾತನಾಡಲು ಬರುವುದಿಲ್ಲ, ಹಾಗಾಗಿ ಅದರ ಬಗ್ಗೆ ನಾನು ಮಾತನಾಡುವುದು ಸರಿಯಲ್ಲಾ.

ನನ್ನ ಹತ್ಯೆಗೆ ಸಂಚು ರೂಪಿಸಿರುವ ವಿಚಾರವೇ ಅರಗಿಸಿಕೊಳ್ಳಲು ಆಗುತ್ತಿಲ್ಲಾ. ಜೊತೆಗೆ ಕುಳಿತುಕೊಂಡು ಸಾಕಷ್ಡು ಬಾರಿ ಮಾತಾಡಿದ್ದೇವೆ. ಊಟಾ ಮಾಡಿದ್ದೇವೆ. ಒಂದು ವೇಳೆ ಸಂಚು ರೂಪಿಸಿದ್ದರೆ. ಅದರ ಬದಲು ಎರಡು ಚಮಚ ವಿಷ ನೀಡಿದ್ದರೆ ಸಾಕಿತ್ತು ಖುಷಿಖುಷಿಯಿಂದ ಪ್ರಾಣ ಬೀಡುತ್ತಿದ್ವಿ. ಮಹಾಭಾರತದಲ್ಲಿ ಶಕುನಿ ಬಾಬಾ ಹೇಗೋ, ಹಾಗೇ ಇಲ್ಲಿ ನಮ್ಮೆಲ್ಲರ ಬದುಕಿನಲ್ಲಿ ಚಂದುಮಾಮಾ ಎಂಟ್ರಿಯಾಗಿ ಎಲ್ಲರ ಬದುಕನ್ನೇ ಹಾಳು ಮಾಡಿ ಬಿಟ್ಟಿದ್ದಾರೆ. ಇನ್ನೂ ಈ ಕುರಿತು ದೂರು ನೀಡುವ ವಿಚಾರ, ನಮ್ಮ ನ್ಯಾಯವಾದಿಗಳ ಜೊತೆ ಮಾತಾಡುತ್ತೇನೆ. ರಿಸ್ಕ್ ಅನ್ನುವುದಕ್ಕಿಂತ ಭಾವನೆಗಳು ಮುಖ್ಯವಾಗಿರುತ್ತವೆ ಎಂದುಮುತ್ತಗಿ ಹೇಳಿದ್ದಾರೆ.