ಹುಬ್ಬಳ್ಳಿ –
ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ವೃದ್ಧಿಸುತ್ತಿದ್ದು,ಕಳ್ಳತನ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ.

ಹು-ಧಾ ಮಹಾನಗರ ಪಾಲಿಕೆ ವಲಯ ಕಚೇರಿ 11 ರಲ್ಲಿ ಬರುವ 09 ಆಟೋ ಟಿಪ್ಪರ್ ಗಾಡಿಗಳ ಬ್ಯಾಟರಿ ಕಳ್ಳತನ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹೌದು.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಮನೆ ಮನೆಯ ಕಸ ಸಂಗ್ರಹಣೆ ಮಾಡುವ 9 ಆಟೋ ಟಿಪ್ಪರಗಳ ಬ್ಯಾಟರಿ ಕಳ್ಳತನ ಆಗಿದೆ.

ವಲಯ ಕಚೇರಿ 11ರ ಕಂಪ್ಯಾಕ್ಟರ ಸ್ಟೇಷನ್ ನಲ್ಲಿ ನಿಲ್ಲಿಸಿದ್ದ 09 ಗಾಡಿಗಳ ಬ್ಯಾಟರಿಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.

KA25 D 9672, KA25 D 9666, KA25 D 9802, KA25 D 9659, KA25 D 9668, KA25 D 9657, KA25 D 9660, KA25 D 9669, KA25 D 9664 ನಂಬರಿನ ಗಾಡಿಗಳ ಬ್ಯಾಟರಿ ಗಳನ್ನು ಕಳ್ಳತನ ಮಾಡಲಾಗಿದೆ.

ಎಂದು ವಲಯ ಕಚೇರಿ 11ರ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಒಂದು ಘಟನೆ ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು,ಪಾಲಿಕೆ ವಾಹನಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ ಖದೀಮರಿಗೆ ಕಾನೂನು ರೀತಿಯಲ್ಲಿ ಬಿಸಿ ಮುಟ್ಟಿಸಬೇಕಿದೆ.ಇನ್ನೂ ಕಳ್ಳತನವನ್ನು ಮಾಡಿದ್ದಾದರೂ ಯಾರು ಎಂಬ ಪ್ರಶ್ನೆಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.