ಬೆಂಗಳೂರು –
ಸಾಮಾನ್ಯವಾಗಿ ಶಿಕ್ಷಕರೆಂದರೆ ಶಾಲೆಯಲ್ಲಿ ಮಕ್ಕಳಿಗೆ ಬೋಧನೆ ಸೇರಿದಂತೆ ಹತ್ತು ಹಲವಾರು ಕೆಲಸ ಕಾರ್ಯ ಗಳು ಇದರೊಂದಿಗೆ ಇಲಾಖೆ ಯ ಬೇರೆ ಬೇರೆ ಚಟುವಟಿಕೆ ಗಳು ಕೂಡಾ ಇದ್ದೇ ಇರುತ್ತವೆ ಹೀಗಿರುವಾಗ ಕೊಪ್ಪಳ ದ ಗಂಗಾವತಿ ಸರ್ಕಾರಿ ಶಾಲೆಯ ಶಿಕ್ಷಕರು ವಿಶೇಷ ಕಾರ್ಯದ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ
ಹೌದು ಬಿಡುವಿನ ವೇಳೆ ಶಿಕ್ಷಕರಿಂದಲೇ ಸರ್ಕಾರಿ ಶಾಲೆಗಳ ಸೌಂದರ್ಯೀಕರಣ ಕೆಲಸ ನಡೆಯು ತ್ತಿದೆ ನಲಿಕಲಿ ನಕ್ಷತ್ರ ತಂಡದ ಸೇವೆಗೆ ಈಗ ರಾಜ್ಯದಲ್ಲಿಯೇ ತುಂವಾ ಮೆಚ್ಚುಗೆಯ ಕಾರ್ಯ ನಡೆಯುತ್ತಿದೆ.
ಗಂಗಾವತಿಯ ಸರ್ಕಾರಿ ಶಾಲೆಗಳ ಶಿಕ್ಷಕರು ನಲಿಕಲಿ ನಕ್ಷತ್ರ ಎಂಬ ತಂಡ ಕಟ್ಟಿಕೊಂಡು ಶಾಲೆಗಳನ್ನು ಸುಂದರಗೊಳಿಸುವ ಕಾಯಕ ಮಾಡುತ್ತಿದ್ದಾರೆ.
ನಲಿಕಲಿ ನಕ್ಷತ್ರ ತಂಡದ ಸೇವೆಯ ಕುರಿತು ಶಿಕ್ಷಕಿ ಮಾಲಾ ಮಾತನಾಡಿ ಮಕ್ಕಳನ್ನು ತಮ್ಮ ಶಾಲೆ ಗಳತ್ತ ಆಕರ್ಷಿಸಿ ಅವರಿಗೆ ಉತ್ತಮ ಶಿಕ್ಷಣ ನೀಡಬೇಕಿದೆ.ಇದರ ಜೊತೆಗೆ ಕಟ್ಟಡದ ಸೌಂದರ್ಯಕ್ಕೂ ಗಮನ ಕೊಡಬೇಕು. ಒಳ ಮತ್ತು ಹೊರಾಂಗಣಗಳನ್ನು ಆಕರ್ಷಣೀಯಗೊ ಳಿಸಲು ನಾನಾ ಚಿತ್ತಾರಗಳ ಮೊರೆ ಹೋಗುವುದು ಸಹಜ ಇದಕ್ಕಾಗಿ ಶಾಲೆಗಳಿಗೆ ಹೊಸ ರೂಪವನ್ನು ನೀಡಲಾಗುತ್ತಿದೆ ಎಂದರು
ಆದರೆ ಕೆಲವು ಸರ್ಕಾರಿ ಶಾಲೆಗಳಲ್ಲಿ ಮೂಲ ಭೂತ ಸೌಕರ್ಯಗಳ ಕೊರತೆ ಇರುತ್ತದೆ. ಇದಕ್ಕಾಗಿಯೇ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕಿದ ಉದಾಹ ರಣೆಗಳಿವೆ.ಆದ್ರೆ ಇಲ್ಲೊಂದು ಸರ್ಕಾರಿ ಶಿಕ್ಷಕರ ತಂಡ ಮಕ್ಕಳನ್ನು ಶಾಲೆಗೆ ಸೆಳೆಯುವ ಉದ್ದೇಶ ದೊಂದಿಗೆ ಕೆಲಸ ಮಾಡುತ್ತಿದೆ.
ಶಾಲಾ ಬಿಡುವಿನ ಅವಧಿಯಲ್ಲಿ ಶಾಲೆಯ ಗೋಡೆಗಳಿಗೆ ಚಿತ್ತಾರಗಳನ್ನು ಬಿಡಿಸುವ ಮೂಲಕ ಗಮನ ಇವರು ಸೆಳೆಯುತ್ತಿದ್ದಾರೆ.ನಲಿಕಲಿ ನಕ್ಷತ್ರ’ ತಂಡ.ಗಂಗಾವತಿ ತಾಲೂಕಿನ ವಿವಿಧ ಶಾಲೆಗಳಲ್ಲಿ ನಾನಾ ವಿಷಯಗಳನ್ನು ಬೋಧನೆ ಮಾಡುವ ಸಂಧ್ಯಾ,ಮಾಲಾ, ನಾಗರತ್ನ, ಅನಿತಾ, ಮಲ್ಲಮ್ಮ, ಮಂಜುಳಾ, ನೀಲಮ್ಮ, ಶ್ರೀಧರ, ಮಲ್ಲೇಶಪ್ಪ ಹಾಗು ಕಲ್ಲನಗೌಡ ಎಂಬ ಶಿಕ್ಷಕರು ನಲಿಕಲಿ ನಕ್ಷತ್ರ ಎಂಬ ಹೆಸರಲ್ಲಿ ತಂಡ ಕಟ್ಟಿಕೊಂಡು ಸೇವೆ ನೀಡುತ್ತಾ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..