ಬೆಂಗಳೂರು –
ಇನ್ನೇನು ರಾಜ್ಯದಲ್ಲಿ ಸಾಮೂಹಿಕ ಚುನಾ ವಣೆಗಳು ಆರಂಭಗೊಳ್ಳುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದು ಬೆಂಗಳೂರಿನ ಮಹಾನಗರ ಪಾಲಿಕೆಯ ಚುನಾವಣೆ ಮುಗಿಯು ತ್ತಿದ್ದಂತೆ ವಿಧಾನಸಭಾ ಚುನಾವಣೆ ನಡೆಯಲಿದ್ದು ಈಗಾಗಲೇ ಎಲ್ಲಾ ಪಕ್ಷದವರು ಒಂದು ಕಡೆಗೆ ಬಿಡುವಿಲ್ಲದೇ ಸಿದ್ದತೆಯನ್ನು ಮಾಡುತ್ತಿದ್ದರೆ ಮತ್ತೊಂದು ಕೆಡೆಗೆ ಇತ್ತ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸೂಚನೆಯೊಂದು ಶಿಕ್ಷಕರಿಗೆ ತಲೆ ನೋವನ್ನು ತಂದಿಟ್ಟಿದೆ.
ಹೌದು ಮತದಾರರ ಪಟ್ಟಿಯ ಪರಿಷ್ಕರಣೆಗೆ ಈಗಲೇ ಶಿಕ್ಷಕರನ್ನು ನಿಯೋಜನೆ ಮಾಡುತ್ತಿದ್ದಾರೆ. ಆರಂಭದಲ್ಲಿ ಸಧ್ಯ ಬೆಂಗಳೂರಿನಲ್ಲಿ ಈ ಒಂದು ಕಾರ್ಯಕ್ಕೆ ಶಿಕ್ಷಕರನ್ನು ನೇಮಕ ಮಾಡಿ ಇಲಾಖೆ ಆದೇಶವನ್ನು ಹೊರಡಿಸಿದ್ದು ಹೀಗಾಗಿ ಇತ್ತ ಶಾಲೆಯ ಕೆಲಸ ಮಾಡಬೇಕಾ ಅಥವಾ ಇಲಾಖೆ ಯ ಸೂಚನೆಯನ್ನು ಪಾಲಿಸಬೇಕಾ ಎಂಬ ದೊಡ್ಡ ದಾದ ಚಿಂತೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂ ಡಿರುವ ಶಿಕ್ಷಕರಿದ್ದಾರೆ.
ಸಧ್ಯ ಆರಂಭದಲ್ಲಿ ಮತಗಟ್ಟೆ ಹಂತದ ಅಧಿಕಾರಿ ಗಳಾಗಿ ನಿಯೋಜಿತವಾಗಿರುವ ಶಿಕ್ಷಕರು ಮತ ದಾರರ ಪಟ್ಟಿ ಪರಿಷ್ಕರಣಾ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದ್ದು ಹೀಗಾಗಿ ಇದನ್ನು ಈಗಲೇ ಗಂಭೀರ ವಾಗಿ ಪರಿಗಣಿಸಿ ಸೂಕ್ತವಾಗಿ ಆದೇಶವನ್ನು ಮಾಡಿಸಿ ಹಿಂದೆ ತಗೆದುಕೊಳ್ಳುವಂತೆ ಕ್ರಮವನ್ನು ಕೈಗೊಳ್ಳಲು ಒತ್ತಾಯವನ್ನು ಮಾಡಬೇಕಾಗಿದೆ.
ಸಧ್ಯ ಬೆಂಗಳೂರು ವ್ಯಾಪ್ತಿಯ ಕ್ಷೇತ್ರಗಳಿಗೆ ಈಗಾಗಲೇ ನಿಯೋಜನೆ ಮಾಡಲಾಗಿದ್ದು, ಸೂಕ್ತ ತರಬೇತಿ ನೀಡಲಾಗಿದೆ ಅಲ್ಲದೇ ಡಿಸೆಂಬರ್ 12 ರವರೆಗೆ ಮನೆಮನೆ ಸಮೀಕ್ಷಾ ಕಾರ್ಯ ನಡೆಯ ಲಿದ್ದು ಭಾರತ ಚುನಾವಣಾ ಆಯೋಗದ ನಿರ್ದೇ ಶನದಂತೆ ಬಿಎಲ್‌ಒಗಳು ಕಾರ್ಯನಿರ್ವಹಿಸ ಬೇಕು ಲೋಪಗಳಾಗದಂತೆ ಎಚ್ಚರಿಕೆ ವಹಿಸ ಬೇಕು ಎಂದು ಆಯುಕ್ತ ಆರ್.ವಿಶಾಲ್ ಸೂಚಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್…..