ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇನತನ ಆಯೋಗ ರಚನೆ ವಿಚಾರ ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತಿನಂತೆ ವೇತನ ಪರಿಷ್ಕರಣೆ ಸಂಬಂಧ ಸಮತಿ ರಚನೆ ಮಾಡೋದಕ್ಕೆ ತಯಾರಿಯನ್ನು ನಡೆಸಲಾಗುತ್ತಿ ದ್ದಾರೆ ಈ ಮೂಲಕ ಚುನಾವಣೆ ವರ್ಷದಲ್ಲಿಯೇ ಭರ್ಜರಿ ಗಿಫ್ಟ್ ನ್ನು ಸರ್ಕಾರ ಸರ್ಕಾರಿ ನೌಕರರಿಗೆ ನೀಡಲಿದೆ.
ಈ ಸಮಿತಿ ವರದಿ ನೀಡುವುದಕ್ಕೆ ಮೂರು ತಿಂಗಳ ಗಡುವು ನೀಡಲಾಗಿದೆ ಎಂಬ ಮಾಹಿತಿಯೂ ಇದೆ. ಜನವರಿ ಪ್ರಾರಂಭದಲ್ಲಿ ಈ ಸಮಿತಿಯಿಂದ ವರದಿ ಬರಲಿದ್ದು ಆ ಬಳಿಕ ಪರಿಷ್ಕೃತ ವೇತನ ನೀತಿಯಂತೆ ವಿವಿಧ ಸೌಲಭ್ಯ ದೊರೆಯಲಿದೆ.
ಇನ್ನೂ ವೇತನ ಪರಿಷ್ಕರಣೆ ಮಾಡೋದಕ್ಕೆ ಹಣಕಾಸು ಇಲಾಖೆ ಸಕಾರಾತ್ಮಕ ಅಭಿಪ್ರಾಯ ನೀಡಿದ್ದು ವೇಳೆ ವೇತನ ಪರಿಷ್ಕರಣೆಯಾದರೆ ವಾರ್ಷಿಕ ಹನ್ನೆರಡು ಸಾವಿರ ಕೋಟಿ ರೂ ಹೆಚ್ಚುವರಿ ವೆಚ್ಚವಾಗಲಿದೆ ಎಂದು ಅಂದಾಜಿಸ ಲಾಗಿದೆ.
ಸದ್ಯ ನಮ್ಮರಾಜ್ಯದಲ್ಲಿ ಮಂಜೂರಾದ ಹುದ್ದೆ ಕಡಿಮೆಯಿದ್ದು ಹೆಚ್ಚುವರಿ ಹುದ್ದೆ ಮಂಜೂರು ಮಾಡುವ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ನೌಕರರ ಮೇಲೆ ಹೆಚ್ಚಿನ ಒತ್ತಡವಿದ್ದು,ಈ ಕಾರಣದಿಂದ ವೇತನ ಪರಿಷ್ಕರಣೆ ಮಾಡಬೇಕೆಂಬ ಒತ್ತಾಯವಿದೆ.