ಧಾರವಾಡ –
ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ಸ್ವಾಗತಿಸಲು ಧಾರವಾಡ ದಲ್ಲಿ ಬಿಜೆಪಿ ಪಕ್ಷದ ನಾಯಕರು ಮುಖಂಡರು ಕಾರ್ಯಕರ್ತರು ಬ್ಯಾನರ್ ಹಾಕಿದ್ದರು ಈ ಒಂದು ಬ್ಯಾನರ್ ಗಳಲ್ಲಿ ಶಾಸಕ ಅರವಿಂದ ಬೆಲ್ಲದ ಅವರ ಪೊಟೊ ವನ್ನು ಹಾಕಲಾಗಿಲ್ಲ.


ಜಿಲ್ಲೆಗೆ ನೂತನವಾಗಿ ಸಚಿವರಾಗಿ ಶಂಕರ ಪಾಟೀಲ ಮುನೇನಕೊಪ್ಪ ಅವರ ಇಂದು ಆಗಮಿಸಿದರು ಇವರನ್ನು ಸ್ವಾಗತ ಮಾಡಲು ಬ್ಯಾನರ್ ಹಾಕಲಾ ಗಿತ್ತು.ಇದರಲ್ಲಿ ಬೆಲ್ಲದ ಅವರ ಪೋಟೋ ಕೈ ಬಿಟ್ಟ ಹಿನ್ನಲೆಯಲ್ಲಿ ಧಾರವಾಡ ದಲ್ಲಿನ ಬ್ಯಾನರ್ ಹರಿದು ಹಾಕಿದರು
https://youtu.be/p-BHGeUvf6A
ಬಿಜೆಪಿ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಅವರ ಪೋಟೋ ಇಲ್ಲದಕ್ಕೆ ಆಕ್ರೋಶವನ್ನು ವ್ಯಕ್ತಪಡಿಸ ಲಾಯಿತು.ಅರವಿಂದ ಬೆಲ್ಲದ ಅಭಿಮಾನಿಗಳು ಬ್ಯಾನರ್ ಹರಿದು ಹಾಕಿದರು.ಮಹ್ಮದ್ ಶಫಿ ಬಿಜಾಪೂರ ಎಂಬ ಕಾರ್ಯಕರ್ತನು ಆಕ್ರೋಶವನ್ನು ವ್ಯಕ್ತಪಡಿಸಿದ್ದು ಕಂಡು ಬಂದಿತು

ಅರವಿಂದ ಬೆಲ್ಲದ ಅವರ ಅಭಿಮಾನಿಯಿಂದ ಈ ಒಂದು ಆಕ್ರೋಶ ಕಂಡು ಬಂದಿತು.ಜಿಲ್ಲಾಧಿಕಾರಿ ಕಚೇರಿ ಎದುರು ಹಾಕಿರುವ ಬ್ಯಾನರ್ ಹಾಗೇ ಟೋಲ್ ನಾಕಾ ದಲ್ಲಿ ಹಾಕಿದ ಬ್ಯಾನರ್ ಹರಿದರು.

ಬ್ಯಾನರ್ ನಲ್ಲಿ ಶಾಸಕ ಅರವಿಂದ ಬೆಲ್ಲದ ಅವರ ಪೋಟೋ ಹಾಕದಿದ್ದಕ್ಕೆ ಈ ಒಂದು ಆಕ್ರೋಶ ವ್ಯಕ್ತವಾಯಿತು.ಅಭಿಮಾನಿಯನ್ನು ಉಪನಗರ ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
