ಹುಬ್ಬಳ್ಳಿ –
ಮಹಾಮಾರಿ ಕೋವಿಡ್ ನ ಸಮಯದಲ್ಲಿ ಜೀವನವನ್ನು ಒತ್ತೆ ಇಟ್ಟು ಆರೋಗ್ಯ ಇಲಾಖೆಯವರೊಂದಿಗೆ ಹಗಲು ರಾತ್ರಿ ಎನ್ನುತ್ತಾ ಕರ್ತವ್ಯ ವನ್ನು ಮಾಡಿದ ಶಿಕ್ಷಕರಿಗೆ ಕೊನೆಗೂ ಇಲಾಖೆ ಸಿಹಿ ಸುದ್ದಿಯ ಸಂದೇಶವೊಂದನ್ನು ನೀಡಿದೆ.ಹೌದು ಆ ಒಂದು ಸಮಯದಲ್ಲಿ ಮನೆ ಮನೆ ಸಮೀಕ್ಷೆ ಮಾಡುತ್ತಾ ಆಸ್ಪತ್ರೆ ಭೇಟಿ ನೀಡುತ್ತಾ ಕೆಲಸ ಮಾಡಿದ ಶಿಕ್ಷಕರಿಗೆ ಗಳಿಕೆ ರಜೆಯನ್ನು ಮಂಜೂರು ಮಾಡಿ ಹುಬ್ಬಳ್ಳಿಯ ಬಿಇಓ ಅವರು ಆದೇಶವನ್ನು ಮಾಡಿದ್ದಾರೆ
ರಜೆ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜೆಯನ್ನಾಗಿ ಹತ್ತು ದಿನ ಮಂಜೂರು ಮಾಡಿ ಕ್ಷೇತ್ರ ಶಿಕ್ಷಣಾ ಧಿಕಾರಿಗಳು ಹುಬ್ಬಳ್ಳಿ ಶಹರ ವಲಯ ಇವರು ಆದೇಶವನ್ನು ಮಾಡಿದ್ದಾರೆ.ಅಲ್ಲದೇ ಈ ಕುರಿತು ಕೂಡಲೇ ಸೇವಾ ಪುಸ್ತಕ ದಲ್ಲಿ ನಮೂದಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಆದೇಶವನ್ನು ಮಾಡಿದ್ದು ಇನ್ನೂ ಇತ್ತ ಈ ಒಂದು ವಿಚಾರ ಕುರಿತು ಶಿಕ್ಷಕರು ಗಳಿಕೆ ರಜೆಯನ್ನು ನೀಡು ವಂತೆ ಒತ್ತಾಯವನ್ನು ಮಾಡಿದ್ದರು.