ಧಾರವಾಡ –
ಇಂದಿನಿಂದ SSLC ಪರೀಕ್ಷೆ ಆರಂಭವಾಗಲಿದ್ದು ಪರೀಕ್ಷಾ ಹಿನ್ನಲೆಯಲ್ಲಿ ಒಂದು ಕಡೆಗೆ ಸಾಕಷ್ಟು ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಹೀಗಾಗಿ ಈ ಒಂದು ಸಮಯದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಿ ಎಂದು ಮಾಜಿ ಸಚಿವ ಸಂತೋಷ ಲಾಡ್ ಕರೆ ನೀಡಿದ್ದಾರೆ.ಕಲಘಟಗಿ,ಮತ್ತು ಅಳ್ನಾವರ ಭಾಗದಲ್ಲಿ ಮಳೆ ನಿರಂತರವಾಗಿ ಆಗ್ತಿದೆ. ಈ ಸಮಯದಲ್ಲಿ ನಮ್ಮೆಲ್ಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ನಿಮ್ಮ ಸಂತೋಷ್ ಲಾಡ್ ಮಾಡುವ ಮನವಿ ಏನಂದ್ರೆ,ಮಳೆಯಿಂದ ಅಥವಾ ಸಾರಿಗೆ ಸಮಸ್ಯೆಯಿಂದ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಪರದಾಡುತ್ತಿರುವ SSLC ವಿದ್ಯಾರ್ಥಿ ಗಳು ನಿಮ್ಮ ಕಣ್ಣಿಗೆ ಬಿದ್ದರೆ ದಯವಿಟ್ಟು ಅವರಿಗೆ ನಿಮ್ಮ ವಾಹನಗಳಲ್ಲಿ ಪರೀಕ್ಷಾ ಕೇಂದ್ರ ತಲುಪಿಸುವ ವ್ಯವಸ್ಥೆ ಮಾಡಿ.ದಯವಿಟ್ಟು ನನ್ನ ಈ ಮನವಿ ಯನ್ನು ನೀವೆಲ್ಲ ಈಡೇರಿಸುತ್ತೀರಿ ಅಂತ ನಂಬಿದ್ದೇನೆ ಎಂದಿದ್ದಾರೆ

ಇದೇ ವೇಳೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ ಗಳಿಗೆ ಶುಭ ಕೋರಿದರು.