ಧಾರವಾಡದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯತ್ವಕ್ಕೆ ಚಾಲನೆ …..

Suddi Sante Desk

ಧಾರವಾಡ –


ಧಾರವಾಡದ ತಾಲೂಕು ಟೀಚರ್ಸ್ ಸೊಸಾಯಿಟಿ ಯಲ್ಲಿ ಧಾರವಾಡ ಜಿಲ್ಲಾ ಮಟ್ಟದ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಭೆಯನ್ನು ಕರೆಯಲಾಗಿತ್ತು, ರಾಜ್ಯ ಪ್ರಧಾನ ಕಾರ್ಯದರ್ಶಿ ಶುಭಂಕರ ಚಕ್ರವರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕರೋನಾ ಮಹಾ ಮಾರಿಯಿಂದಾಗಿ ಮಕ್ಕಳ ಶೈಕ್ಷಣಿಕ ಪ್ರಗತಿ ತುಂಬಾ ಕುಂಟಿತವಾಗಿದ್ದು, ಒಂದರಿಂದ ಐದನೆಯ ತರಗತಿ ಯ ಮಕ್ಕಳಿಗೆ ಶಾಲೆ ಆರಂಭವಾಗಲೇ ಇಲ್ಲ ಆನ್ ಲೈನ್ ತರಗತಿಗಳು ಸಹ ಅಷ್ಟೊಂದು ಪರಿಣಾಮ ಕಾರಿಯಾಗಿ ನಡೆಯಲಿಲ್ಲ ಎಂದರು.

ಇತ್ತೀಚೆಗೆ ತರಗತಿ ಆರರಿಂದ ಒಂಬತ್ತನೆಯ ತರಗತಿ ಗಳು ಆರಂಭವಾಗಿ ಕಲಿಕೆ ಚನ್ನಾಗಿ ನಡೆದಿತ್ತು ಮತ್ತೇ ಕರೋನಾ ಕಾರಣಕ್ಕಾಗಿ ಆ ತರಗತಿಗಳು ಮತ್ತೆ ಮುಚ್ಚಲಾಯಿತು, ಹೀಗಾದರೆ ಮಕ್ಕಳ ಶಿಕ್ಷಣ ತುಂಬಾ ಕ್ಷೀಣಿಸುತ್ತದೆ, ಆದ್ದರಿಂದ ಭಾರತ ಜ್ಞಾನ ವಿಜ್ಞಾನ ಸಮಿತಿ ವಠಾರ ಶಾಲೆ ಎಂಬ ಹೊಸ ಆಲೋಚನೆಯೊಂದಿಗೆ ವಿದ್ಯಾಗಮ ಆರಂಭಿಸಲು ಶಿಕ್ಷಣ ಇಲಾಖೆಗೆ ಸಲಹೆ ನೀಡಿ ಅದೂ ಸಹ ಚನ್ನಾಗಿ ನಡೆದಿತ್ತು.

ನಂತರದಲ್ಲಿ ಅದೂ ಸಹ ರದ್ದಾಯಿತು ಇನ್ನೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಂಚಾಯತಿ ಮಟ್ಟದ ಗ್ರಂಥಾಲಯದ ಮೂಲಕ ಮಕ್ಕಳಿಗೆ ಉಚಿತ ಪ್ರವೇಶ ಕಾರ್ಡ ವಿತರಿಸಿ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಮೂಲಕ ಓದುವ ಬೆಳಕು ಎಂಬ ವಿಶಿಷ್ಟ ವಿನೂತನ ಕಾರ್ಯಕ್ರಮ ರೂಪಿಸಿ ಯಶಸ್ವಿಗೊಳಿಸಲಾಯಿ ತೆಂದರು.

ಇನ್ನೂ ಇದೇ ವೇಳೆ ರಾಜ್ಯ ಉಪಾದ್ಯಕ್ಷರು ಎಫ್ ಸಿ ಚೇಗರಡ್ಡಿ ಮಾತನಾಡಿ, ಕಲಿಕೆ ಧೀರ್ಘ ಕಾಲದವರೆಗೆ ನಿಂತರೆ ಮತ್ತೆ ಆರಂಭಿಸುವುದು ತುಂಬಾ ಕಷ್ಟಕರ, ಒಬ್ಬ ಮಹಿಳೆ ಹೆಣಿಕೆಯನ್ನು ನಿರಂತರವಾಗಿ ಹೆಣೆ ಯುತ್ತಾ, ಒಂದು ವರ್ಷದಿಂದ ಹೆಣಿಕೆಯನ್ನು ನಿಲ್ಲಿಸಿ ದರೆ ಮತ್ತೆ ಹೆಣಿಕೆಯನ್ನು ಮಾಡುವುದು ಕೆಲಕಾಲ ಕಷ್ಟ ಆಗುವುದು, ಹಾಗೆಯೇ ಮಕ್ಕಳ ಕಲಿಕೆ ಸಹ ಈಗ ಹಾಗೆಯೇ ಆಗಿದೆ ಆದ್ದರಿಂದ ಕರೋನಾ ಕಾಲದ ಸಂಕಷ್ಟದಲ್ಲಿ ಯಾವುದಾದರೂ ಮೂಲ ದಿಂದ ಮಕ್ಕಳಿಗೆ ಕಲಿಕೆ ಆರಂಭ ಆಗಬೇಕು ಇದ ಕ್ಕಾಗಿ ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಹೊಸ ಆಲೋಚನೆ ಯೊಂದಿಗೆ ಚಿಂತನೆ ನಡೆಸಿದೆ ಎಂದರು.

ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂ ಡ ಬರಹಗಾರ ಚಿಂತಕ ಡಾ, ವಿಶ್ವನಾಥ ಚಿಂತಾಮಣಿ ಮಾತನಾಡಿ, ಕರೋನಾ ರೋಗದಿಂದ ಶಿಕ್ಷಣ ಕ್ಷೇತ್ರಕ್ಕೆ ತುಂಬಾ ಹೊಡೆತ ಬಿದ್ದಿದೆ, ಇದನ್ನು ಪುನರ್ ನಿರ್ಮಾ ಣದ ಹೊಣೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನ ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅದ್ಯಕ್ಷರಾ ದ ಗುರು ತಿಗಡಿ ವಹಿಸಿದ್ದರು, ರಾಜ್ಯ ಕಾರ್ಯಕಾರಿ ಸದಸ್ಯ ಎಲ್ ಐ ಲಕ್ಕಮ್ಮನವರ ಕುಂದಗೋಳ ತಾಲೂಕು ಅದ್ಯಕ್ಷ ಎನ್ ಜಿ ಕೊಡ್ಲಿ, ಕಲಘಟಗಿ ತಾಲೂಕು ಅದ್ಯಕ್ಷ ಎಸ್ ಎಫ್ ಪಾಟೀಲ,ಧಾರವಾಡ ತಾಲೂಕು ಅದ್ಯಕ್ಷ ಚಂದ್ರಶೇಖರ್ ತಿಗಡಿ ವಿ ಎನ್ ಕೀರ್ತಿವತಿ, ಆರ್ ಆರ್ ಹುಲ್ಲೂರ, ಸೀತಾ ಚಾಕಲ ಬ್ಬಿ, ಸಿದ್ದಾರೂಢ ಹೂಗಾರ, ರುದ್ರೇಶ ಕುರ್ಲಿ ಅಜೀತಸಿಂಗ ರಜಪೂತ, ರಾಜೀವಸಿಂಗ ಹಲವಾಯಿ ಪ್ರಕಾಶ ವಣ್ಣೂರ, ಮುಂತಾದವರು ಇದ್ದರು,ಇದೇ ಸಂದರ್ಭದಲ್ಲಿ ಬಿಜಿವಿಎಸ್ ಸದಸ್ಯತ್ವಕ್ಕೆ ಚಾಲನೆ ನೀಡಲಾಯಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.