ಬೆಂಗಳೂರು –
ಸರ್ಕಾರಿ ಶಾಲೆ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ ಹೌದು ಸರ್ಕಾರಿ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ವಿವಿಧ ಕ್ರೀಡೆಗಳ ಕುರಿತು ಇಂಗ್ಲಿಷ್ ಪ್ರೀಮಿಯರ್ ಲೀಗ್ ಸ್ಪೋರ್ಟ್ಸ್ ನಿಂದ ತರಬೇತಿ ನೀಡಲಾಗುವುದು.ಸರ್ಕಾರಿ ಶಾಲೆಯ ಮಕ್ಕಳ ಕ್ರೀಡಾ ಸಾಮರ್ಥ್ಯ ಹೆಚ್ಚಿಸಲು, ಭವಿಷ್ಯದಲ್ಲಿ ಮಕ್ಕಳನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸುವಲ್ಲಿ ಸಹಕಾರ ಪಡೆಯಲು ಆಪರೇಶನಲ್ ಅಲಯನ್ಸ್ ಒಪ್ಪಂದಕ್ಕೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕಚಂದ್ರ, ಬ್ರಿಟಿಷ್ ಕೌನ್ಸಿಲ್ ನ ದಕ್ಷಿಣ ಭಾರತ ನಿರ್ದೇಶಕಿ ಜನಕ ಪುಷ್ಪನಾಥನ್ ಸಹಿ ಹಾಕಿದ್ದಾರೆ
ಈ ಒಪ್ಪಂದದ ಬಳಿಕ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರೀಮಿಯರ್ ಲೀಗ್ ಪ್ರೈಮರಿ ಸ್ಟಾರ್ಸ್ ಪ್ರಾಜೆಕ್ಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮೊದಲ ಹಂತದಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳ ದೈಹಿಕ ಶಿಕ್ಷಕರಿಗೆ ಕ್ರೀಡಾ ಮತ್ತು ಜೀವನ ಕೌಶಲ ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕ್ರೀಡೆ ಕಬಡ್ಡಿ, ಕೊಕ್ಕೊ ಇತರೆ ಪ್ರಾಚೀನ ಕ್ರೀಡೆಗಳನ್ನು ಫುಟ್ ಬಾಲ್ ನಂತೆ ಉಳಿಸಿ ಬೆಳೆಸಬೇಕು. ಆರು ವರ್ಷ ವಯಸ್ಸಿನಿಂದಲೇ ಶಾಲಾ ಮಕ್ಕಳಿಗೆ ತರಬೇತಿ ನೀಡಲಾ ಗುತ್ತದೆ ಶಿಕ್ಷಕರಿಗೂ ತರಬೇತಿ ನೀಡಲು ತಿಳಿಸಲಾಗಿದೆ ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..