ಧಾರವಾಡ –
ಧಾರವಾಡದಲ್ಲಿ ಶಿಕ್ಷಕರ ಅತಿಥಿಗೃಹ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆಯನ್ನು ಮಾಡಲಾಯಿತು.ಹೌದು ನಗರದ ಕೊಪ್ಪದ ಕೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶಾಸಕ ಅಮೃತ ದೇಸಾಯಿ ನೂತನ ಕಟ್ಟಡ ಗೆ ಭೂಮಿ ಪೂಜೆಯನ್ನು ಮಾಡಿದರು.ಧಾರವಾಡ ತಾಲೂಕ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತು ಬೆಳೆಸುವ ಸಹಕಾರ ಸಂಘದ ಕಟ್ಟಡ ದ 2 ನೇ ಮಹಡಿ ಮೇಲೆ ನಿರ್ಮಿಸಲು ಉದ್ದೇಶಿಸಿರುವ “ಶಿಕ್ಷಕರ ಅತಿಥಿಗೃಹ ” ಕಟ್ಟಡದ ಕಾಮಗಾರಿಗೆ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ಶಾಸಕ ಅಮೃತ ದೇಸಾಯಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ ಹಾಗೂ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾದ ತವನಪ್ಪ ಅಷ್ಟಗಿ ರವರು ಚಾಲನೆ ನೀಡಿದರು.
ಕೊಪ್ಪದಕೇರಿ ಧಾರವಾಡದಲ್ಲಿ ಇರುವ ಶಿಕ್ಷಕರ ಸಹಕಾರ ಸಂಘಕ್ಕೆ ಆಗಮಿಸಿ ಶಿಕ್ಷಕರ ಅತಿಥಿಗೃಹ ಕಟ್ಟಡದ ಕಾಮ ಗಾರಿ ಪ್ರಾರಂಭಿಸಲು ಗುದ್ಲಿ ಪೂಜಾ ಕಾರ್ಯಕ್ರಮವನ್ನು ಜರುಗಿಸಿದರು.ಮತ್ತು ಈ ಶಿಕ್ಷಕರ ಅತಿಥಿಗೃಹ ಕಾಮಗಾರಿಗೆ ತಮ್ಮ ಪ್ರದೇಶಾಭಿವೃದ್ದಿ ಅನುದಾನವನ್ನು ಮಂಜೂರು ಮಾಡಬೇಕೇಂದು ಮಾನ್ಯ ಸಂಸದರಿಗೆ ಮತ್ತು ಶಾಸಕರಿಗೆ ಸಹಕಾರ ಸಂಘದಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗುರು ತಿಗಡಿ. ಉಪಾಧ್ಯಕ್ಷ ರಾದ ಶಂಕರಪ್ಪ ಘಟ್ಟಿ.ಆಡಳಿತ ಮಂಡಳಿ ನಿರ್ದೇಶಕರಾದ ಕಾಶಪ್ಪ ದೊಡವಾಡ.ರಾಜ ಮಾಳವಾಡ. ಶ್ರೀಮತಿ ಗಂಗವ್ವ ಕೋಟಿಗೌಡರ.ಮಾಜಿ ಅಧ್ಯಕ್ಷರಾದ ಗುರು ಫೋಳ ಸದಸ್ಯರಾದ ಚಂದ್ರಶೇಖರ ತಿಗಡಿ. ಡೊಕ್ಕನ ವರ,ಕ್ರೂಸೋಜ ಹಾಗೂ ಸಂಘದ ಶಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಮ್ಮ ಶಿಕ್ಷಕರ ಸಹಕಾರ ಸಂಘದ ಕಟ್ಟಡದ ಕಾಮಗಾರಿಗೆ ಚಾಲನೆ ಮಾಡಿರುವ ಎಲ್ಲ ನಮ್ಮ ಜನಪ್ರೀಯ ಜನಪ್ರತಿನಿಧಿ ಗಳಿಗೆ.ಹಿತೈಷಿಗಳಿಗೆ ಹಾಗೂ ಆಡಳಿತ ಮಂಡಳಿ ನಿರ್ದೇಶ ಕರಿಗೆ,ಶಿಕ್ಷಕರಿಗೆ ಹಾಗೂ ಶಿಬ್ಬಂದಿ ವರ್ಗದವರಿಗೆ ಸಂಘದ ಆಡಳಿತ ಮಂಡಳಿ ವತಿಯಿಂದ ಧನ್ಯವಾದಗಳನ್ನು ಮತ್ತು ಕೃತಘ್ನತೆಗಳನ್ನು ಗುರು ತಿಗಡಿ ಮತ್ತು ಸರ್ವ ಸದಸ್ಯರು ಸಲ್ಲಿಸಿದ್ದಾರೆ.