ಧಾರವಾಡ –
ಧಾರವಾಡ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರು,ಉತ್ತಮ ರಸ್ತೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ.ಗ್ರಾಮಸ್ಥರು ಅವು ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ರಾದ ಅಮೃತ ದೇಸಾಯಿ ಹೇಳಿದರು.ಧಾರವಾಡ ತಾಲೂ ಕಿನ ಕನಕೂರು ಹಾಗೂ ಚಂದನಮಟ್ಟಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತ ನಾಡಿದ ಅವರು ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಬಿಜೆಪಿ ಸರಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದರು.

ಇನ್ನೂ ಈಗಾಗಲೇ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು ಸೇದಂತೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ.ಅದಕ್ಕೂ ಮೊದಲು ಕರ್ನಾಟಕ ನೀರಾವರಿ ನಿಗಮ ನಿಯಮಿತ 2021-22 ಸಾಲಿನ ಅನುದಾನದಡಿ ಯಲ್ಲಿ ಕನಕೂರು ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.ನಂತರ 2021-22 ಚಂದನಮಟ್ಟಿ ಗ್ರಾಮದ ಎಸ್ ಟಿ ಕಾಲೊನಿ ಹಾಗೂ ಕಾಲೊನಿಗೆ ಸಂಪರ್ಕಿಸುವ ರಸ್ತೆಗಳ ಕಾಂಕ್ರೀಟಿಕರಣ, ಪಕ್ಕಾ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿ ಚಾಲನೆ ನೀಡಿದರು.ತದನಂತರ ಸರ್ಕಾರಿ ಯೋಜನೆ ಗಳಾದ ವೃದ್ಯಾಪ ವೇತನ,ವಿಧವಾ ವೇತನ ಸೇರಿದಂತೆ ಅನೇಕ ಯೋಜನೆಗಳ ಸದುಪಯೋಗ ಪಡೆದುಕೊಂಡು ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ಸಂತೋಷ ಬಿರಾದಾರ್, ಮುಖಂಡರಾದ ಗುರುನಾಥಗೌಡ ಗೌಡರ,ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಶಂಕ್ರಪ್ಪ ಆರೆನ್ನವರ್, ಉಪಾಧ್ಯಕ್ಷರಾದ ಚನ್ನಬಸಪ್ಪ ಕವಳಿ,ಶಿವು ಬೇಳ್ಳಾರದ, ಈರಪ್ಪ ತಲವಾಯಿ ಬೀರಪ್ಪ ಕೊಪ್ಪದ,ಅಶೋಕ್ ನವಲಗಿ, ವಿಜಯ್ ಪವಾರ್,ಹೂವಪ್ಪ ಎಮೊಜಿ,ಗಂಗಣ್ಣ ಕಾಶಿದ ಸೇರಿದಂತೆ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.






















