ಫ್ಲೋರಿಡಾ –
ಸಾಮಾನ್ಯವಾಗಿ ಆ ವಸ್ತು ಈ ವಸ್ತುಗಳನ್ನು ಕದಿಯೊದನ್ನು ನೋಡಿದ್ದೇವೆ ಕೇಳಿದ್ದೇವೆ.ಆದರೆ ಇಲ್ಲೊಬ್ಬ ಮಹಾಶಯ ಮಾಡಿದ್ದನ್ನು ಕೇಳಿದರೆ ಶಾಕ್ ಆಗತೀರಾ.ಹೌದು ತನ್ನ ಹುಡುಗಿಗೆ ಪ್ರಪೋಸ್ ಮಾಡಿದ್ದನ್ನು ಕೇಳಿದರೆ ನೀವು ಒಂದು ಕ್ಷಣ ದಂಗಾಗುತ್ತೀರಿ. ಹಳೇ ಗರ್ಲ್ ಫ್ರೆಂಡ್ ಗೆ ಕೊಟ್ಟಿದ್ದ ಉಂಗುರವನ್ನೇ ಕದ್ದು ಹೊಸ ಗರ್ಲ್ ಫ್ರೆಂಡ್ ಗೆ ಕೊಟ್ಟು ಪ್ರಪೋಸ್ ಮಾಡಿದ ಭೂಪ ಇದೀಗ ಹಳೇ ಗರ್ಲ್ ಫ್ರೆಂಡ್ ಕೋಪಕ್ಕೆ ಕಾರಣನಾಗಿದ್ದಾನೆ.

ಇಂತದ್ದೊಂದು ಘಟನೆ ಫ್ಲೋರಿಡಾದಲ್ಲಿ ನಡೆದಿದೆ. 48 ವರ್ಷದ ಕೋಸೆಫ್ ಡೇವಿಸ್ ಈ ಹಿಂದೆಯೇ ಯುವತಿಯೊಬ್ಬಳಿಗೆ ಉಂಗುರವನ್ನಿತ್ತು ಪ್ರೇಮ ತೋಡಿಕೊಂಡಿದ್ದ. ಅದಕ್ಕೆ ಆಕೆ ಒಪ್ಪಿ ಉಂಗುರ ಸ್ವೀಕರಿಸಿದ್ದಳು ಕೂಡ. ಅದಾದ ಮೇಲೆ ಇಬ್ಬರೂ ಚೆನ್ನಾಗಿಯೇ ಇದ್ದರು.

ಇತ್ತೀಚೆಗೆ ಆಕೆ ತನ್ನ ಪ್ರಿಯತಮನ ಫೇಸ್ಬುಕ್ ವಾಲ್ ನೋಡುವಾಗ ಆತ ಯಾವುದೋ ಹುಡುಗಿ ಯೊಂದಿಗೆ ಇರುವುದು ಕಂಡುಬಂದಿದೆ.ಆ ಫೋಟೋವನ್ನು ಸರಿಯಾಗಿ ಗಮನಿಸಿದಾಗ, ಫೋಟೋದಲ್ಲಿರುವ ಯುವತಿ ತನ್ನ ಉಂಗುರದ ರೀತಿಯದ್ದೇ ಉಂಗುರ ತೊಟ್ಟಿರುವುದು ಕಂಡುಬಂದಿದೆ. ಅನುಮಾನ ಬಂದ ಹಿನ್ನೆಲೆಯಲ್ಲಿ ಆಕೆ ತಕ್ಷಣ ತನ್ನ ಆಭರಣಗಳ ಬಾಕ್ಸ್ ಪರಿಶೀಲಿಸಿದ್ದಾಳೆ.

ಅದರಲ್ಲಿ ಎಲ್ಲ ಆಭರಣ ಇದ್ದು, ಅದೊಂದೇ ಉಂಗುರು ಕಳುವಾಗಿರುವುದು ತಿಳಿದುಬಂದಿದೆ. ಈ ವಿಚಾರ ಆಕೆಗೆ ಗೊತ್ತಾಗಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಜೋಸೆಫ್ ಕಾಣೆಯಾಗಿದ್ದಾನೆ. ಇದೀಗ ಆತನ ವಿರುದ್ಧ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿಯ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.