ಧಾರವಾಡ –
ಧಾರವಾಡದಲ್ಲಿ ದೊಡ್ಡ ಪ್ರಮಾಣದಲ್ಲಿನ ಬಸ್ ದುರಂತ ವೊಂದು ತಪ್ಪಿದೆ.ಹೌದು ಸಾರಿಗೆ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬದುಕಿದರು ಬಸ್ ನಲ್ಲಿದ್ದ 50 ಜನ ಪ್ರಯಾಣಿಕರು.ಹೌದು ಕೊಪ್ಪಳ ದಿಂದ ಧಾರವಾಡ ಕಡೆಗೆ ಬರುತ್ತಿದ್ದ ಬಸ್ ನ ಬ್ರೇಕ್ ಫೇಲ್ ಆಗಿ ಈ ಒಂದು ಅವಘಡ ಸಂಭವಿಸಿದೆ
ಚಾಲಕನ ಬಸ್ ನಿಯಂತ್ರಣದಿಂದಾಗಿ ತಪ್ಪಿದೆ ದೊಡ್ಡ ನಗರದ ನವಲೂರು ಸೇತುವೆ ಬಳಿ ಈ ಒಂದು ಘಟನೆ ನಡೆದಿದೆ.ಸೇತುವೆ ಇಳಿಯುತ್ತಿದ್ದಂತೆ ಬಸ್ ನ ಬ್ರೇಕ್ ಫೇಲ್ ಆಗಿದೆ ನಂತರ ಚಾಲಕ ಬಸ್ ನ್ನು ನಿಯಂತ್ರಣ ಮಾಡಿ ಮಾಡಿ ಸೇತುವೆ ಗೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾರೆ
ಬ್ರೇಕ್ ಹತ್ತದ ಕಾರಣ ನಿಧಾನವಾಗಿ ನಿಯಂತ್ರಣ ಮಾಡಿ ಸೇತುಗೆ ಬಂದು ಗುದ್ದಿಸಿ ನಿಯಂತ್ರಣ ಮಾಡಿದ್ದಾರೆ ಬಸ್ ಚಾಲಕ.ಬಸ್ ನಲ್ಲಿದ್ದ ಐವತ್ತಕ್ಕೂ ಹೆಚ್ಚು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು
ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಈ ಒಂದು ದೊಡ್ಡ ಅವಘಡವೊಂದು.ಸ್ಥಳಕ್ಕೇ ಧಾರವಾಡ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಸ್ ಚಾಲಕನ ಚಾಣಾಕ್ಷಣತನಕ್ಕೆ ಬಸ್ ನಲ್ಲಿದ್ದವರಿಂದ ಮೆಚ್ಚು ಗೆಯನ್ನು ವ್ಯಕ್ತಪಡಿಸಿದ್ದಾರೆ.
ಸುದ್ದಿ ಸಂತೆ ಧಾರವಾಡ ಡೆಸ್ಕ್


























