ಧಾರವಾಡ
ರಾಜ್ಯದಲ್ಲಿಯೇ ದೊಡ್ಡದೊಂದು ಜೂಜಾಟದ ಪ್ರಕರಣವನ್ನು ಧಾರವಾಡ ಜಿಲ್ಲಾ ಪೊಲೀಸರು ಭೇಧಿಸಿದ್ದಾರೆ. ಒಂದೆಡೆ ದೀಪಾವಳಿಯ ಸಂಭ್ರಮ ಮತ್ತೊಂದೆಡೆ ತಮ್ಮದೇಯಾದ ಲೋಕದಲ್ಲಿ ಭರ್ಜರಿಯಾಗಿ ಜೂಜಾಟದಲ್ಲಿ ತೊಡಗಿದ್ದ ಟೀಮ್ ಮೇಲೆ ಧಾರವಾಡ ಗ್ರಾಮೀಣ ಪೊಲೀಸರು ದಾಳಿ ಮಾಡಿದ್ದಾರೆ. ನಿನ್ನೇ ತಡರಾತ್ರಿವರೆಗೆ ನಗರದ ಹೊರವಲಯದ ಕ್ಲಬ್ ನಲ್ಲಿ ಆಡುತ್ತಿದ್ದವರನ್ನು ಗ್ರಾಮೀಣ ಪೊಲೀಸರು ಭರ್ಜರಿಯಾಗಿ ದಾಳಿ ಮಾಡಿ ರೇಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಹೇಂದ್ರ ನಾಯಕ ಸಿಪಿಐ ಸಿದ್ದನಗೌಡರ ಡಿಸ್ಪಿ ರವಿ ನಾಯಕ ನೇತ್ರತ್ವದಲ್ಲಿನ ತಂಡ ಎಸ್ಪಿ ಕೃಷ್ಣ ಕಾಂತ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಕಾಂಗ್ರೇಸ್ ಪಕ್ಷದ ಮುಖಂಡ ಇಸ್ಮಾಯಿಲ್ ತಮಟಗಾರ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಸೇರಿದಂತೆ ಬರೋಬ್ಬರಿ 50 ಕ್ಕೂ ಹೆಚ್ಚು ಜನರನ್ನು ಬಂಧಿಸಿ ಗ್ರಾಮೀಣ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಇನ್ನೂ ದಾಳಿಯಲ್ಲಿ 49 ಲಕ್ಷ,ಕ್ಕೂ ಹೆಚ್ಚು ಹಣ ಪತ್ತೆಯಾಗಿದ್ದು ಇವರೆಲ್ಲರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಗ್ರಾಮೀಣ ಪೊಲೀಸರು ದೀಪಾವಳಿಯಲ್ಲಿ ಭರ್ಜರಿಯಾಗಿ ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸಿ ತನಿಖೆ ಮಾಡ್ತಾ ಇದ್ದಾರೆ. ಇನ್ನೂ ಈ ಪ್ರಕರಣ ಕುರಿತಂತೆ ಸಾಕಷ್ಟು ಒತ್ತಡಗಳು ಬಂದರೂ ಕೂಡಾ ಜಿಲ್ಲಾಪೊಲೀಸರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಕೇಸ್ ದಾಖಲು ಮಾಡಿದ್ದಾರೆ. ಈವರೆಗೆ ಧಾರವಾಡ ಜಿಲ್ಲೆಯಲ್ಲಿ ನೋಡಿದರೆ ಇದೊಂದು ದೊಡ್ಡ ಪ್ರಮಾಣದಲ್ಲಿನ ಜೂಜಾಟದ ರೇಡ್ ಆಗಿದ್ದು ಪೊಲೀಸರ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಕೃಷ್ಣಕಾಂತ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.