ಧಾರವಾಡ –

ಬೈಕ್ ಅಪಘಾತವಾಗಿ ಒರ್ವ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಉದಯ ಹಾಸ್ಟೇಲ್ ಬಳಿ ಈ ಒಂದು ಅಪಘಾತವಾಗಿದೆ.ವೇಗವಾಗಿ ಬಂದ ಬೈಕ್ ಸವಾರ ರಸ್ತೆಯಲ್ಲಿ ಮಲಗಿದ್ದ ಆಕಳಿಗೆ ಗುದ್ದಿದ್ದಾರೆ ಪರಿಣಾಣವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.



ಶ್ರೀನಿವಾಸ್ ಎಂಬುವನೇ ಮೃತನಾಗಿರುವ ಬೈಕ್ ಸವಾರನಾಗಿದ್ದು ಗಾಂಧೀ ಚೌಕ ನಿವಾಸಿಯಾಗಿದ್ದು ಸಪ್ತಾಪೂರದಿಂದ ಉದಯ ಹಾಸ್ಟೇಲ್ ಕಡೆಗೆ ಹೊರಟಿದ್ದ ಸಮಯದಲ್ಲಿ ಈ ಒಂದು ಅಪಘಾತ ವಾಗಿದ್ದು ಉದಯ ಹಾಸ್ಟೇಲ್ ಬಳಿ ಅಪಘಾತ ವಾಗಿದ್ದು ಅಪಘಾತದ ರಭಸಕ್ಕೆ ಶ್ರೀನಿವಾಸ ಸ್ಥಳ ದಲ್ಲೇ ಮೃತನಾಗಿದ್ದು ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸರಾದ ರವಿರಾಜ ಪಾಟೀಲ,ಈರಣ್ಣ ಲಕ್ಕಮ್ಮನವರ,ಹಬೀಬ ಸೇರಿ ದಂತೆ ಹಲವರು ಸ್ಥಳಕ್ಕೇ ಭೇಟಿನೀಡಿ ಪರಿಶೀಲನೆ ಮಾಡಿ ದೂರನ್ನು ದಾಖಲು ಮಾಡಿಕೊಂಡಿದ್ದು ತನಿಖೆ ಮಾಡತಾಇದ್ದಾರೆ. ಇನ್ನೂ ಮುಖ್ಯವಾಗಿ ನಗರದಲ್ಲಿ ಬೀದಿ ಜಾನುವಾರಗಳು ಹೆಚ್ಚಾಗಿದ್ದು ಇದರಿಂದಾಗಿ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಪಾಲಿಕೆಯವರು ಈ ಕುರಿತಂತೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಸಾರ್ವಜನಿಕರುಒತ್ತಾಯವನ್ನು ಮಾಡಿದ್ದಾರೆ.