ಧಾರವಾಡ –
ಬೈಕ್ ವೊಂದು ನಾಯಿಗೆ ಡಿಕ್ಕಿಯಾಗಿ ಒರ್ವ ಮಹಿಳೆಯೊಬ್ಬಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ಧಾರವಾಡದ ಸಲಕಿನಕೊಪ್ಪ ಗ್ರಾಮದ ಬಳಿ ನಡೆದಿದೆ.

ಧಾರವಾಡ ತಾಲ್ಲೂಕಿನ ಸಲಕಿನಕೊಪ್ಪ ಗ್ರಾಮದ ಕ್ರಾಸ್ ನಲ್ಲಿ ಈ ಒಂದು ಅಪಘಾತ ನಡೆದಿದೆ.ದಿಲ್ ಶಾದ್ ಬಿಸ್ಮಿಲ್ಲಾ ಚಪ್ಪರಬಂದ್ ಎಂಬವರೇ ಸಾವಿಗೀಡಾದ ಮಹಿಳೆಯಾಗಿದ್ದಾರೆ.

ಮೃತ ಮಹಿಳೆ ಒ್ರತಿದಿನ ಬೆನಕಟ್ಟಿ ಗ್ರಾಮದಿಂದ ಧಾರವಾಡಗೆ ಮನೆ ಕೆಲಸಕ್ಕೆ ಬರುತ್ತಿದ್ದರು. ಪ್ರಕಾಶ ಇಜಪ್ಪನವರ ಎಂಬುವರ ಬೈಕ್ ನಲ್ಲಿ ಇಂದು ಬರುತ್ತಿದ್ದರು.ಸಲಕಿನಕೊಪ್ಪ ಗ್ರಾಮದ ಬಳಿ ಬರುವಾಗ ಬೈಕ್ ಗೆ ನಾಯಿ ಯೊಂದು ಅಡ್ಡ ಬಂದಿದೆ. ಇದರಿಂದ ಬಿದ್ದ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.ಇನ್ನೂ ಬೈಕ್ ಸವಾರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.