ಧಾರವಾಡ –
ಬೈಕ್ ವೊಂದು ನಿಯಂತ್ರಣ ಕಳೆದುಕೊಂಡು ಅಪ ಘಾತಕ್ಕಿಡಾದ ಘಟನೆ ಧಾರವಾಡದ ರಾಯಾಪೂರ ದಲ್ಲಿ ನಡೆದಿದೆ. ರಾಯಾಪೂರದ ಬೆಲ್ಲದ ಶೋ ರೂಮ್ ಬಳಿ ಈ ಒಂದು ಅಪಘಾತ ವಾಗಿದೆ.

ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಬರುತ್ತಿದ್ದ ಬೈಕ್ ವೇಗವಾಗಿತ್ತು ಈ ಒಂದು ಸಮಯದಲ್ಲಿ ಸವಾರ ನಿಯಂತ್ರಣ ಕಳೆದುಕೊಂಡಿದ್ದಾನೆ. ಹೀಗಾಗಿ ಸ್ಕೀಡ್ ಅಗಿದೆ.

ಇನ್ನೂ ಅಪಘಾತದಲ್ಲಿ ಬೈಕ್ ನಲ್ಲಿದ್ದ ಯುವಕ ತೀವ್ರವಾಗಿ ಗಾಯಗೊಂಡಿದ್ದು ಕೂಡಲೇ SDM ಆಸ್ಪತ್ರೆಗೆ ಸೇರಿಸಲಾಯಿತು.

ಸಧ್ಯ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾನೆ.ಸ್ಥಳಕ್ಕೆ ಭೇಟಿ ನೀಡಿರುವ ಧಾರವಾಡ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ ಬೈಕ್ ಸವಾರನ ಕುರಿತು ಮಾಹಿತಿಯನ್ನು ತಗೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ