ಲಾರಿ ಚಕ್ರದಲ್ಲಿ ಸಿಲುಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು

Suddi Sante Desk

ಹುಬ್ಬಳ್ಳಿ – ಸ್ಕೂಟಿ ಮತ್ತು ಲಾರಿ ನಡುವೆ ಅಪಘಾತವಾಗಿ ಸ್ಥಳದಲ್ಲೇ ಬೈಕ್ ಸವಾರನೊಬ್ಬ ಸಾವಿಗೀಡಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ನಗರದ ಶಿರೂರ ಪಾರ್ಕ್ ಬಳಿ ಈ ಒಂದು ಅಪಘಾತವಾಗಿದೆ. ಮನೆಯಿಂದ ಎಪಿಎಮ್ ಸಿ ಗೆ ಸ್ಕೂಟಿನಲ್ಲಿ ಹೋಗುತ್ತಿದ್ದ ಜುನೇದ ಶೇಖ್ ಎದುರಿಗೆ ಬರುತ್ತಿದ್ದ ಲಾರಿ ಚಕ್ರದಡಿ ಸಿಲುಕಿಕೊಂಡು ಸಾವಿಗೀಡಾದ್ದಾನೆ. ವೇಗವಾಗಿ ಬರುತ್ತಿದ್ದ ಎರಡು ವಾಹನಗಳ ನಡುವೆ ಈ ಒಂದು ಅಪಘಾತ ವಾಗಿದೆ.

ನಗರದ ವಿದ್ಯಾನಗರದ ಶಿರೂರ ಪಾರ್ಕ್ ಬಳಿ ಲಾರಿವೊಂದು ಹೋಗುತ್ತಿತ್ತು ಇದರ ಹಿಂದಿನ ಚಕ್ರದ ಅಡಿಯಲ್ಲಿ ಸ್ಕೂಟಿ ಸಿಲುಕಿಕೊಂಡಿದೆ‌. ಪರಿಣಾಮವಾಗಿ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬೆಳ್ಳಂ ಬೆಳಿಗ್ಗೆ ಈ ಒಂದು ಅಪಘಾತ ಸಂಭವಿಸಿದೆ.


ಮಧ್ಯ ಪ್ರದೇಶ ಗಾನ್ ಗಾಂವ್ ದಿಂದ ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆಗೆ ಈರುಳ್ಳಿ ತೆಗೆದುಕೊಂಡು ಹೋಗುವಾಗ ಲಾರಿಯ ಹಿಂದಿನ ಚಕ್ರಕ್ಕೆ ಸಿಲುಕಿ ಯುವಕ ಮೃತಪಟ್ಟಿದ್ದಾನೆ. ಮೃತಪಟ್ಟವನನ್ನ ಹುಬ್ಬಳ್ಳಿ ಕೇಶ್ವಾಪುರದ ಜುನೈದ ಶೇಕ್ (೧೭) ಎಂದು ಗುರುತಿಸಲಾಗಿದೆ.ಜುನೇದ್ ಕೇಶ್ವಾಪೂರ ನಿವಾಸಿಯಾಗಿದ್ದಾನೆ.

ತಲೆಯ ಮೇಲೆಯೇ ಲಾರಿ ಹಾಯ್ದು ಹೋಗಿದ್ದರಿಂದ ಮುಖ ಗುರುತು ಸಿಗದಂತೆ ಛಿದ್ರವಾಗಿದೆ.
ಘಟನೆ ನಡೆದ ತಕ್ಷಣವೇ ಲಾರಿಯನ್ನ ಅಲ್ಲಿಯೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ‌‌.ಇನ್ನೂ ಪರಾರಿಯಾಗಿರುವ ಚಾಲಕನ ಹುಡುಕಾಟವನ್ನು ಉತ್ತರ ಸಂಚಾರಿ ಪೊಲೀಸರು ಮಾಡ್ತಾ ಇದ್ದಾರೆ.ಲಾರಿ ಮಾಲೀಕನ ಬಗ್ಗೆ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ. ಕೂಡಲೇ ಉತ್ತರದ
ಸಂಚಾರಿ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಕಾಂತ್ ತೊಟಗಿ ಮತ್ತು ಸಿಬ್ಬಂದಿ ಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡ್ತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.