ಧಾರವಾಡ –
ಬೈಕ್ ಗೆ ಕಾರು ಡಿಕ್ಕಿಯಾದ ಘಟನೆ ಧಾರವಾಡದ ನವಲೂರು ಗ್ರಾಮದಲ್ಲಿ ನಡೆದಿದೆ.
ನವಲೂರು ಗ್ರಾಮದ ಕೆಳಗಿನ ರಸ್ತೆಯಲ್ಲಿ ಈ ಒಂದು ಅಪಘಾತ ನಡೆದಿದೆ. ಓವರ್ ಟೇಕ್ ಮಾಡುವ ಅಬ್ಬರದಲ್ಲಿ ಬೈಕ್ ಗೆ ಕಾರು ಡಿಕ್ಕಿಯಾಗಿದೆ.
ಬೈಕ್ ಸವಾರ ತಿಪ್ಪಣ್ಣ ಈಶ್ವರಪ್ಪ ಬಳ್ಳೂರ ತೀವ್ರವಾಗಿ ಗಾಯಗೊಂಡಿದ್ದು SDM ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಬೈಕ್ ಸವಾರ ನವಲೂರು ಗ್ರಾಮದವರಾಗಿದ್ದಾರೆ.
ಇನ್ನೂ ಪದೇ ಪದೇ ಹೀಗೆ ಅಪಘಾತವಾಗುತ್ತಿದ್ದು ಇದರಿಂದ ನವಲೂರು ಗ್ರಾಮಸ್ಥರು ದಿಢೀರ್ ರಸ್ತೆ ತಡೆದು ಪ್ರತಿಭಟನೆ ಮಾಡಿದರು. ರಸ್ತೆ ಬಂದ್ ಆಗುತ್ತಿದ್ದಂತೆ ದಿಢೀರ್ ಸ್ಥಳಕ್ಕೆ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಲಗೌಡ ನಾಯ್ಕರ, ASI ಶಿಂಧೆ,ಸಿಬ್ಬಂದಿ ಗಳಾದ ಬಸವರಾಜ ಲಮಾಣಿ,ಮಲ್ಲಾಡ,ರವಿರಾಜ ಪಾಟೀಲ,ಈರಣ್ಣ ಮಲ್ಲಿಗವಾಡ ಸೇರಿದಂತೆ ಹಲವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರತಿಭಟನಾಕಾರರನ್ನು ಮನವೊಲಿಸಿದರು.ಇತ್ತ ಕಾರನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮವನ್ನು ಪೊಲೀಸರು ಕೈಗೊಂಡಿದ್ದಾರೆ.