ಧಾರವಾಡದ KMF ಬಳಿ ಎರಡು ಬೈಕ್ ಗಳ ಮುಖಾಮುಖಿ ಡಿಕ್ಕಿ – ಗಾಯಗೊಂಡ ಬೈಕ್ ಸವಾರರು

Suddi Sante Desk

ಧಾರವಾಡ –

ಎರಡು ಮತ್ತು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಧಾರವಾಡದ KMF ಬಳಿ ನಡೆದಿದೆ. ಹೊಂಡಾ ಶೈನ್ ಮತ್ತು ಹೊಂಡಾ ಆಕ್ಟೀವ್ ಸ್ಕೂಟಿ ನಡುವೆ ಅಪಘಾತವಾಗಿದೆ.

KMF ಬಳಿಯ ತುಷಾರ ಬಾರ್ ಮುಂದೆ ಈ ಒಂದು ಅಪಘಾತವಾಗಿದೆ‌.KA25 EM 6375 ಸಂಖ್ಯೆಯ ಹೊಂಡಾ ಆಕ್ಟಿವ್ ಮತ್ತು KA25 ES 2271 ಸಂಖ್ಯೆಯ ಶೈನ್ ಬೈಕ್ ನಡುವೆ ಈ ಒಂದು ಅಪಘಾತವಾಗಿದೆ.

ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ವಿಷಯ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.