ವಾರ್ಡ್ 16 ರಲ್ಲಿ ಜೋರಾಗಿದೆ ಬಿಜೆಪಿ ಪಕ್ಷದ ಪ್ರಚಾರ – ಮನೆ ಮನೆಗೆ ತೆರಳಿ ರಾಜೇಶ್ವರಿ ಸಾಲ ಗಟ್ಟಿ ಅವರಿಂದ ಮತಯಾಚನೆ ಮತದಾರರಿಂದ ಅಭೂತಪೂರ್ವ ಬೆಂಬಲ…..

Suddi Sante Desk

ಧಾರವಾಡ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ 16 ರಲ್ಲಿ ಬಿಜೆಪಿ ಪಕ್ಷದ ಪ್ರಚಾರ ಜೋರಾಗಿದೆ.ಪಕ್ಷದ ಅಭ್ಯರ್ಥಿ ಶ್ರೀಮತಿ ರಾಜೇಶ್ವರಿ ಸಾಲಗಟ್ಟಿ ಪ್ರಚಾರ ಬೆಳ್ಳಂ ಬೆಳಿಗ್ಗೆ ಜೋರಾಗಿ ಕಂಡು ಬರುತ್ತಿದೆ.ಇಂದು ವಾರ್ಡ್ ನಲ್ಲಿ ವಾಯು ವಿಹಾರ ದೊಂದಿಗೆ ಮತಯಾಚನೆ ಮಾಡಿದರು

ವಾರ್ಡ್ ನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಆಪ್ತರು ಮಹಿಳೆಯರು ಸೇರಿದಂತೆ ಹಲವರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ಅಭ್ಯರ್ಥಿ ಶ್ರೀಮತಿ ರಾಜೇಶ್ವರಿ ಸಾಲಗಟ್ಟಿ ಪರ ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ.

ವಾರ್ಡ್ ನಂಬರ್ 16 ರಲ್ಲಿ ಪ್ರತಿಯೊಂದು ಮನೆಗೆ ಮನೆಗೆ ತೆರಳಿ ಬಿಡುವಿಲ್ಲದೇ ಪ್ರಚಾರವನ್ನು ಮಾಡುತ್ತಾ ಮತಯಾಚನೆಯನ್ನು ಮಾಡುತ್ತಿದ್ದಾರೆ. ಪ್ರಮುಖವಾಗಿ ಮತಯಾಚನೆಯ ಸಮಯದಲ್ಲಿ ಈವರೆಗೆ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ ಅನುದಾನ ದಲ್ಲಿ ಕೈಗೊಂಡಿರುವ ಅಭಿವೃದ್ದಿ ಕೆಲಸ ಕಾರ್ಯಗಳು ಹಾಗೇ ರಾಜ್ಯ ಮತ್ತು ಕೇಂದ್ರ ಸರ್ಕಾರ ದಲ್ಲಿ ಬಿಜೆಪಿ ಸರ್ಕಾರದವಿದ್ದು ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಅವಕಾಶ ನೀಡಿದರೆ ವಾರ್ಡ್ ನಲ್ಲಿ ಅಭಿವೃದ್ದಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು

ಇದರಿಂದ ಇದೊಂದು ಬಾರಿ ಬಿಜೆಪಿ ಗೆ ಮತವನ್ನು ನೀಡುವಂತೆ ಮತದಾರರಲ್ಲಿ ಕೋರಲಾಯಿತು.ಈ ಮೂಲಕ ಅಭಿವೃದ್ದಿಗೆ ಹೆಚ್ಚು ಅನುಕೂಲಕವಾಗಲಿ ದ್ದು ಎಂದು ಅಭ್ಯರ್ಥಿ ರಾಜೇಶ್ವರಿ ಸಾಲಗಟ್ಟಿ ಮತ ದಾರರಲ್ಲಿ ಹೇಳಿದರು.

ಇದರೊಂದಿಗೆ ವಾರ್ಡ್ 16 ರಲ್ಲಿ ಅಬ್ಬರದ ಪ್ರಚಾರವು ನಡೆಯುತ್ತಿದ್ದು ಇದರೊಂದಿಗೆ ಮತಯಾಚನೆ ಮಾಡುತ್ತಿದ್ದಾರೆ.ಪಕ್ಷದ ಅಭ್ಯರ್ಥಿ ಶ್ರೀಮತಿ ರಾಜೇಶ್ವರಿ ಸಾಲಗಟ್ಟಿ ಅವರೊಂದಿಗೆ ಪ್ರಮೋದ ಕಾರಕುನ,ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದು ಮತಯಾಚನೆ ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.