ವಾರ್ಡ್ 42 ರಲ್ಲಿ ಜೋರಾಗಿದೆ ಬಿಜೆಪಿ ಪಕ್ಷದ ಪ್ರಚಾರ – ಮನೆ ಮನೆಗೆ ತೆರಳಿ ಮತಯಾಚನೆ ಮತದಾರರಿಂದ ಅಭೂತಪೂರ್ವ ಸ್ಪಂದನೆ…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ 42 ರಲ್ಲಿ ಬಿಜೆಪಿ ಪಕ್ಷದ ಪ್ರಚಾರ ಜೋರಾಗಿದೆ.ಪಕ್ಷದ ಅಭ್ಯರ್ಥಿ ಮಹಾದೇವಪ್ಪ ನರಗುಂದ ಪ್ರಚಾರ ಜೋರಾಗಿದೆ.

ಬೆಳ್ಳಂ ಬೆಳಿಗ್ಗೆ ವಾರ್ಡ್ ನಲ್ಲಿ ಪ್ರಚಾರ ಜೋರಾಗಿ ಕಂಡು ಬರುತ್ತಿದೆ.ವಾರ್ಡ್ ನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಆಪ್ತರು ಮಹಿಳೆ ಯರು ಸೇರಿದಂತೆ ಹಲವರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ಅಭ್ಯರ್ಥಿ ಮಹಾದೇವಪ್ಪ ನರಗುಂದ ಪರ ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ.

ವಾರ್ಡ್ ನಂಬರ್ 42 ರಲ್ಲಿ ಪ್ರತಿಯೊಂದು ಮನೆಗೆ ಮನೆಗೆ ತೆರಳಿ ಬಿಡುವಿಲ್ಲದೇ ಪ್ರಚಾರವನ್ನು ಮಾಡುತ್ತಾ ಮತಯಾಚನೆಯನ್ನು ಮಾಡುತ್ತಿದ್ದಾರೆ. ಪ್ರಮುಖವಾಗಿ ಮತಯಾಚನೆಯ ಸಮಯದಲ್ಲಿ ಈವರೆಗೆ ಕ್ಷೇತ್ರದಲ್ಲಿ ಪಕ್ಷದ ಶಾಸಕರ ಮತ್ತು ಕೇಂದ್ರ ಸಚಿವರ ಅನುಧಾನದಲ್ಲಿ ಕೈಗೊಂಡಿರುವ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಹೇಳುತ್ತಿದ್ದಾರೆ

ಹಾಗೇ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಸರ್ಕಾರದವಿದ್ದು ಹೀಗಾಗಿ ಈ ಬಾರಿ ಚುನಾವಣೆ ಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಅವಕಾಶ ನೀಡಿದರೆ ವಾರ್ಡ್ ನಲ್ಲಿ ಅಭಿವೃದ್ದಿಗೆ ಹೆಚ್ಚು ಅನುಕೂಲವಾಗುತ್ತದೆ ಇದರಿಂದ ಇದೊಂದು ಬಾರಿ ಬಿಜೆಪಿ ಗೆ ಮತವನ್ನು ನೀಡುವಂತೆ ಮತದಾರರಲ್ಲಿ ಕೋರಲಾಯಿತು.

ಈ ಮೂಲಕ ಅಭಿವೃದ್ದಿಗೆ ಹೆಚ್ಚು ಅನುಕೂಲಕವಾ ಗಲಿದ್ದು ಎಂದು ಅಭ್ಯರ್ಥಿ ಮಹಾದೇವಪ್ಪ ನರಗುಂದ ಮತದಾರರಲ್ಲಿ ಹೇಳಿದರು.ಇದರೊಂ ದಿಗೆ ವಾರ್ಡ್ 42 ರಲ್ಲಿ ಅಬ್ಬರದ ಪ್ರಚಾರವು ನಡೆಯುತ್ತಿದ್ದು ಇದರೊಂದಿಗೆ ಮತಯಾಚನೆ ಮಾಡುತ್ತಿದ್ದಾರೆ.

ಪಕ್ಷದ ಅಭ್ಯರ್ಥಿ ಮಹಾದೇವಪ್ಪ ನರಗುಂದ ಅವರೊಂದಿಗೆ ಹತೇಸಾಬ್ ಮುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದು ಮತಯಾಚನೆ ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.