ಹುಬ್ಬಳ್ಳಿ –
ಧಾರವಾಡದ ವಾರ್ಡ್ 2 ರಲ್ಲಿ ಬಿಜೆಪಿ ಅಭ್ಯರ್ಥಿ ನಿಂಗವ್ವ ಶಂಕರ ಹಾರಿಕೊಪ್ಪ ಅವರ ಪ್ರಚಾರ ಮುಂದುವರೆದಿದೆ. ಇಂದು ಕೂಡಾ ವಾರ್ಡ್ ನ ಹಲವೆಡೆ ಅಬ್ಬರದ ಪ್ರಚಾರವನ್ನು ಮಾಡಿದರು.



ಈಗಾಗಲೇ ಪ್ರಚಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇವರ ಪರವಾಗಿ ಅಲೆ ಕಂಡು ಬರುತ್ತಿದ್ದು ಹೀಗಾಗಿ ಈ ಬಾರಿ ವಾರ್ಡ್ ನಲ್ಲಿ ಇವರ ಪರವಾಗಿ ಗಾಳಿ ಜೋರಾಗಿ ಬೀಸುತ್ತಿದ್ದು ಇಂದು ಕೂಡಾ ಹಲವು ಕಡೆಗಳಲ್ಲಿ ಅಬ್ಬರದ ಪ್ರಚಾರವನ್ನು ಮಾಡಿದರು.

ವಾರ್ಡ್ ನ ಹಲವೆಡೆ ಬಿಡುವಿಲ್ಲದೆ ಪ್ರಚಾರವನ್ನು ಮಾಡಿ ಮತಯಾಚನೆ ಮಾಡಿದರು. ಪಕ್ಷದ ಕಾರ್ಯಕರ್ತರು ಆಪ್ತರು ಮಹಿಳಾ ಮುಖಂಡರು ಹೀಗೆ ಹಲವರೊಂದಿಗೆ ತೆರಳಿ ಮತಯಾಚನೆ ಮಾಡಿದರು

ಅದರಲ್ಲೂ ಪ್ರಮುಖವಾಗಿ ಅಲ್ಪಸಂಖ್ಯಾತರ ಸಮಾಜ ಮತ್ತು ಯುವಕರು ಸೇರಿದಂತೆ ಹಲವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ನಿಂಗವ್ವ ಹಾರಿಕೊಪ್ಪ ಇವರಿಗೆ ಆತ್ಮೀಯವಾಗಿ ಸನ್ಮಾನ ಮಾಡಿದರು.ಹೋದಲೆಲ್ಲ ಪ್ರೀತಿಯ ಬೆಂಬಲವು ಮತದಾರರಿಂದ ಇವರಿಗೆ ಸಿಗುತ್ತಿದೆ

ಇನ್ನೂ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಮಾಡಿ ಮತದಾರರಿಗೆ ಈ ಬಾರಿ ಬಿಜೆಪಿ ಬೆಂಬಲಿಸಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕಾಗಿ ಕೇಳಿಕೊಂಡರು.ಇನ್ನು ಈ ಮೂಲಕ ಎಲ್ಲಾ ಮತದಾ ರರಲ್ಲಿ ಕಳಕಳಿಯಿಂದ ವಿನಂತಿ ಮಾಡಿಕೊಂಡರು.

ಇದೇ ವೇಳೆ ಬಸವರಾಜ ಗುರಿಕಾರ ಕೂಡಾ ಮನೆಗೆ ಆಗಮಿಸಿ ಬೆಂಬಲವನ್ನು ನೀಡಿ ಸನ್ಮಾನಿಸಿ ಗೌರವಿಸಿದರು
