ಉತ್ತರಾಖಾಂಡ್ –
ಪಂಚ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ. ಸುದ್ದಿ ಸಂತೆ ಯೊಂದಿಗೆ ಮಾತನಾಡಿದ ಸಚಿವರು ಪಂಚ ರಾಜ್ಯ. ಗಳಲ್ಲಿನ ಮಹತ್ವದ ಫಲಿತಾಂಶದ ಹಿಂದೆ ರಾಷ್ಟ್ರೀಯ ನಾಯಕರು ಅಧರಲ್ಲೂ ಪ್ರಧಾನಿ ನರೇಂದ್ರ ಮೊದಿ ಸೇರಿ ದಂತೆ ಹಲವರು ಇದ್ದಾರೆ ಹೀಗಾಗಿ ಉತ್ತರಪ್ರದೇಶ ಹಾಗೂ ಉತ್ತರಾಖಂಡ ಬಿಜೆಪಿ ಬಹುಮತ ಸಾಧಿಸಿದೆ ಎಂದರು. ಇನ್ನೂ ಗೋವಾದಲ್ಲಿಯೂ ಗೆಲುವಿನ ಹೆಜ್ಜೆಯನ್ನು ಇರಿಸಿದ್ದು.ನಾವು ಮೂರು ಮುಖ್ಯಮಂತ್ರಿಗಳನ್ನು ಬದಲಾ ಯಿಸಿದ್ದರೂ ಉತ್ತರಾಖಂಡ್ ನಲ್ಲಿ ಮತ್ತೆ ಬಿಜೆಪಿ ಅಧಿಕಾ ರಕ್ಕೆ ಬಂದಿದ್ದು ಉತ್ತರಾಖಂಡದ ಜನರು ಮೋದಿ ಮುಖ ನೋಡಿ ಮತ ಹಾಕಿದ್ದಾರೆ.
ಇದಕ್ಕೆಲ್ಲಾ ನಮ್ಮ ಪಕ್ಷ ಸಂಘ ಟನೆಯೇ ಕಾರಣ ಎಂಬು ದಾಗಿ ಹೇಳಿದರು.ನಾವು ಉತ್ತರಾ ಖಂಡದಲ್ಲಿ 11 ಸಾವಿರ ಮೀಟಿಂಗ್ ಗಳನ್ನು ಮಾಡೋದಕ್ಕೆ ತೀರ್ಮಾನಿಸಿದ್ದೆವು ಆದ್ರೇ ಅಷ್ಟು ಮಾಡೋದಕ್ಕೆ ಸಾಧ್ಯವಾಗಲಿಲ್ಲ.ಈ ನಡುವೆ ಯೂ 80 ಸಾವಿರ ಮೀಟಿಂಗ್ ಮಾಡಿ ದ್ದೇವೆ.ಇದು ಚುನಾವಣಾ ಫಲಿಂತಾಶದಲ್ಲಿ ತಿಳಿದು ಬಂದಿದೆ ಎಂದರು. ಅಂದಹಾಗೇ ಉತ್ತರಾಖಂಡ್ ನ 70 ಸ್ಥಾನಗಳ ಪೈಕಿ ಮ್ಯಾಜಿಕ್ ಸಂಖ್ಯೆ 36 ಬೇಕಿದೆ. ಈಗಾಗಲೇ ಬಿಜೆಪಿ 47 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೇ,ಕಾಂಗ್ರೆಸ್ 20, ಇತರೆ 3 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದಾರೆ ಎನ್ನುತ್ತಾ ಗೆಲುವಿಗೆ ಕಾರಣಿಕರ್ತರಾದ ಮತದಾರ ಪ್ರಭುಗ ಳಿಗೆ ಧನ್ಯವಾದಗಳನ್ನು ಹೇಳಿ ನೂತನವಾಗಿ ಗೆಲುವು ಸಾಧಿಸಿ ದವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಸಂತಸವನ್ನು ವ್ಯಕ್ತಪಡಿಸಿ ಈ ಒಂದು ಮಹತ್ತದ ಗೆಲುವಿನ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಕೂಡಾ ಇದೆ ಎಂದರು
ಮಂಜುನಾಥ ಸರ್ವಿ ಜೊತೆ ಪರಶುರಾಮ ಗೌಡರ ರಾಜಕೀಯ ಬ್ಯೂರೋ ಡೆಸ್ಕ್