ಬೆಳಗಾವಿ –
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿಜೆಪಿ ಯ ಯುವ ಮುಖಂಡ ನೀಲಕಂಠ ಕಪ್ಪಲಗುದ್ದಿ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
29 ವರ್ಷದ ಶ್ರುತಿ ಕಪ್ಪಲಗುದ್ದಿ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದ ನಿವಾಸಿಯಾದ ಶ್ರುತಿ ಕಳೆದ ಎರಡು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಲ್ಲೋಳಿ ಗ್ರಾಮದ ನೀಲಕಂಠ ಕಪ್ಪಲಗುದ್ದಿ ಜೊತೆ ವಿವಾಹವಾಗಿತ್ತು. ಗಂಡ ಪ್ರತಿ ದಿನ ಮನೆಗೆ ಕುಡಿದು ಬರುತ್ತಿದ್ದಕ್ಕೆ ಗಲಾಟೆಯಾಗುತ್ತಿತ್ತಂತೆ. ಇದಕ್ಕೆ ಬೇಸತ್ತು ಶ್ರುತಿ ಮನೆಯ ಬೆಡ್ ರೂಂನಲ್ಲಿ ಫ್ಯಾನ್‌ಗೆ ಸೀರೆ ಕಟ್ಟಿಕೊಂಡು ನೇಣಿಗೆ ಶರಣಾಗಿದ್ದಾರಂತೆ
ಆತ್ಮಹತ್ಯೆ ಮಾಡಿಕೊಂಡ ಶ್ರುತಿಗೆ 15 ತಿಂಗಳ ಮುದ್ದಾದ ಮಗಳಿದ್ದು ಆತ್ಮಹತ್ಯೆಗೂ ಮುನ್ನ ‘ಪ್ಲೀಸ್ ಟೇಕ್ ಕೇರ್ ಆಫ್ ಮೈ ಡಾಟರ್’ ಎಂದು ತಂದೆಗೆ ಶ್ರುತಿ ವಾಟ್ಸಪ್ ಮೆಸೇಜ್ ಮಾಡಿದ್ದಾರೆ. ಬಳಿಕ ಮೆಸೇಜ್ ಗಮನಿಸಿ ವಾಪಸ್ ಕರೆ ಮಾಡಿದಾಗ ಫೋನ್ ರಿಸೀವ್ ಮಾಡದಿದ್ದಾಗ ಮನೆಯವರಿಗೆ ಕರೆ ಮಾಡಿದ್ದಾರೆ.
ಆಗ ಇನ್ನೂ ಮಲಗಿರಬೇಕು ಆಮೇಲೆ ಕರೆ ಮಾಡ್ತಾರೆ ಎಂದು ಹೇಳಿದ್ದಾರಂತೆ. ಬಳಿಕ 10 ಗಂಟೆಗೆ ಅಳಿಯ ನೀಲಕಂಠ ಶ್ರುತಿ ತಂದೆಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡು ವಿಷಯ ತಿಳಿಸಿದ್ದಾನೆ.
ಅಳಿಯ ನಿತ್ಯ ಕುಡಿದು ತಡರಾತ್ರಿ ಆಗಮಿಸುತ್ತಿ ದ್ದಿದ್ದರಿಂದ ಮಗಳು ಶ್ರುತಿ ಮಾನಸಿಕ ಖಿನ್ನತೆಗೊಳಗಾಗಿದ್ದಳು ಎಂದು ಶ್ರುತಿ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.