ಭುವನೇಶ್ವರ –
ಬಿಜೆಪಿ ಪಕ್ಷದ ಶಾಸಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಒಡಿಸ್ಸಾ ದಲ್ಲಿ ನಡೆದಿದೆ.ಅಲ್ಲಿನ ಸರ್ಕಾರದ ನಡೆಯಿಂದ ಬೇಸತ್ತ ಬಿಜೆಪಿಯ ಶಾಸಕರೊಬ್ಬರು ವಿಧಾನಸಭೆಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಭತ್ತ ಖರೀದಿ ವಿಚಾರ ಕುರಿತು ಹಲವು ಬಾರಿ ಹೇಳಿದ್ದು ರಾಜ್ಯ ಸರ್ಕಾರ ಖರೀದಿಸಲು ಮುಂದಾಗುತ್ತಿಲ್ಲ ಹೀಗಾಗಿ ಇದರಿಂದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಮನನೊಂದು ವಿಧಾನಸಭೆಯಲ್ಲಿಯೇ ಶಾಸಕ ಸುಭಾಷ್ ಪಾಣಿಗ್ರಹಿ ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸಾನಿಟೈಜರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೂಡಲೇ ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿದೆ.ಸಧ್ಯ ಸುಭಾಷ್ ಅವರು ಅಪಾಯದಿಂದ ಪಾರಾಗಿದ್ದಾರೆ. ದೇಬ್ ಗಢದಲ್ಲಿ ಸರ್ಕಾರ ಭತ್ತ ಖರೀದಿಸುತ್ತಿರಲಿಲ್ಲ. ಎರಡು ಲಕ್ಷ ಕ್ವಿಂಟಾಲ್ ಗಿಂತಲೂ ಹೆಚ್ಚು ಭತ್ತ ಕೊಳೆಯುತ್ತಿದೆ.ಇದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರದ ಗಮನಸೆಳೆಯುವ ಉದ್ದೇಶದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಶಾಸಕ ಸುಭಾಷ್ ಹೇಳಿದ್ದು ಇನ್ನಾದರೂ ರಾಜ್ಯ ಸರ್ಕಾರ ಭತ್ತ ಖರೀದಿಗೆ ಮುಂದಾಗುತ್ತದೆನಾ ಎಂಬುದನ್ನು ಕಾದು ನೋಡಬೇಕು.