ಧಾರವಾಡ –
ಮಾಜಿ ಶಾಸಕ ಕೊನರಡ್ಡಿ ಪುತ್ರನಿಗೆ ಬ್ಲಾಕಮೇಲ್ ಪ್ರಕರಣ ಕುರಿತಂತೆ ಅವರ ಪುತ್ರ ನವೀನ್ ಕೊನರಡ್ಡಿ ಮಾತನಾಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು ಫೆಬ್ರವರಿ 18 ಕ್ಕೆ ವಾಟ್ಸ್ ಆಪ್ ಕಾಲ್ ಬಂದಿತ್ತು 13 ಸೆಕೆಂಡ್ ವಿಡಿಯೋ ಕಳಿಸಿದ್ರು ನಮ್ಮ ತಂದೆಗೆ ಹೇಳಿದ ಮೇಲೆ ದೂರನ್ನ ನೀಡಿದೆ ಎಂದರು.
3 ಬಾರಿ ಹಣ ಹಾಕಿದ್ದೆನೆ ಈ ಕುರಿತಂತೆ ಸೈಬರ್ ಕ್ರೈಮ್ ನವರು ಅಕೌಂಟ್ ಫ್ರೀಜ್ ಮಾಡಿದ್ರು ಅವರ ಸ್ಕ್ರಿನ್ ಮೇಲೆ ಯಾರು ಅಂತಾ ಕಾಣಲಿಲ್ಲ ಎಂದರು.
ನನ್ನ ಮುಖದ ಮೇಲೆ ಬೆತ್ತಲೆ ಯುವತಿ ಇರುವದು ಎಡಿಟ್ ಮಾಡಿದ್ದಾರೆ ಠಾಣೆಗೆ ಹೋಗುವ ಮೊದಲು ಅಕೌಂಟಗೆ ಹಣ ಹಾಕಿದ್ದೆ ವಿಡಿಯೋ ಶೇರ್ ಮಾಡದಿರಲು ಹಣ ಕೇಳುತಿದ್ದರು ಎಂದರು.
13200 ಹಣ ಹಾಕಿದ್ದೆನೆ ರಾಜಸ್ಥಾನ ಮೂಲದವರು ಪೊಲೀಸರು ಮಾಹಿತಿ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ ಹೋಗಿದೆ ಎಂದರು.
ಇನ್ನೂ ಇದನ್ನು ತಿಳಿದ ತಕ್ಷಣ ಮತ್ತೇ ಅವರು ಸಂಪರ್ಕಿಸಿಲ್ಲ ನನ್ನ ಜೊತೆ ಅವರು ಎರಡು ಸೆಕೆಂಡ್ ಕೂಡಾ ಮಾತನಾಡಿಲ್ಲ ಎಂದರು.
ಸಧ್ಯ ಈ ಕುರಿತಂತೆ ಪೊಲೀಸರಿಗೆ ದೂರನ್ನು ನೀಡಲಾಗಿದ್ದು ಈ ಕುರಿತಂತೆ ಪೊಲೀಸರು ತನಿಖೆ ಮಾಡತಾ ಇದ್ದಾರೆಂದು ನವೀನ್ ಹೇಳಿದರು.