ಹುಬ್ಬಳ್ಳಿ –
ಹುಬ್ಬಳ್ಳಿಯ ನವನಗರದಲ್ಲಿರುವ ಇಪಿಎಫ್ ಕೋ ಆಪರೇಟಿವ್ ಸೊಸೈಟಿಗೆ ಚುನಾವಣೆ ನಡೆಯಿತು. ಸೊಸೈಟಿಯ ನಿರ್ದೇಶಕರ ಸ್ಥಾನಗಳಿಗೆ ಸರ್ವಸದಸ್ಯರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. 2020-25 ರ ಐದು ವರುಷಗಳ ಅವಧಿಗೆ ಚುನಾವಣೆ ಮಾಡಲಾಯಿತು. ಇಪಿಎಫ್ ಕೋ ಆಪರೇಟಿವ್ ಸೊಸೈಟಿ ಚುನಾವಣೆಯನ್ನು ಹುಬ್ಬಳ್ಳಿಯ ನವನಗರದ ಇಪಿಎಫ್ ಪ್ರಾದೇಶಿಕ ಕಚೇರಿಯಲ್ಲಿ ನಡೆಸಲಾಯಿತು.
ಮುಂಬರುವ ಅವಧಿಗೆ ಸಂಘದ ಎಲ್ಲಾ ನಿರ್ದೇಶಕರುಗಳನ್ನು ಸರ್ವ ಸದಸ್ಯರು ಸಭೆಯಲ್ಲಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದರು. ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ನಾಮನಿರ್ದೇಶನ ಮಾಡಲು ಸೊಸೈಟಿ ನಿರ್ದೇಶಕರ ಮಂಡಳಿಯು ಸಭೆ ನಡೆಸಿತು.ಇನ್ನೂ ಗೌರವ ಕಾರ್ಯದರ್ಶಿಯಾಗಿ ನಾಮದೇವ ಬಡಿಗೇರ
ಮತ್ತು ಖಜಾಂಚಿಯಾಗಿ ಶ್ರೀವಲ್ಲಭ ಜೋಶಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಸೊಸೈಟಿಯ ಸಭೆಯಲ್ಲಿ ಅಧ್ಯಕ್ಷರಾದ ಜೆ. ಎ. ಮಂಜುನಾಥ್ ಘೋಷಿಸಿದರು.
ಉಪಾಧ್ಯಕ್ಷರಾದ ಪ್ರಶಾಂತ ಮಹೇಂದ್ರನವರ ಅವರು ನೂತನವಾಗಿ ಆಯ್ಕೆಯಾದ ಎಲ್ಲ ನಿರ್ದೇಶಕರುಗಳಿಗೆ ಅಭಿನಂದನೆ ಸಲ್ಲಿಸಿದರು.ಇದೇ ವೇಳೆ ಮಾತನಾಡಿ ಎಲ್ಲಾ ನಿರ್ದೇಶಕರ ಪರವಾಗಿ ಷೇರುದಾರರಿಗೆ ಉತ್ತಮ ಸೇವೆಯನ್ನು ನೀಡುವ ಭರವಸೆ ನೀಡಿದ್ದಾರೆ.
ಸೊಸೈಟಿಯ ಮಾಜಿ ಕಾರ್ಯದರ್ಶಿ ಕೆ.ವೆಂಕಟೇಶ ಅವರು ಸೊಸೈಟಿ ನಿರ್ದೇಶಕರ ಮಂಡಳಿಯ ಗೌರವ ಸಲಹೆಗಾರರಾಗಿ ನಾಮ ನಿರ್ದೇಶನಗೊಂಡಿದ್ದಾರೆ. ಸಭೆಯಲ್ಲಿ ಸಂಘದ ಎಲ್ಲ ನಿರ್ದೇಶಕರು ಭಾಗವಹಿಸಿದ್ದರು. ಒಟ್ಟಾರೆ ಐದು ವರುಷಗಳ ಸೊಸೈಟಿಗೆ ಇಲಾಖೆಯ ಎಲ್ಲಾ ನೌಕರರು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಒಗ್ಗಟ್ಟನ್ನು ತೋರಿಸಿದ್ರು.ಎಲ್ಲದಕ್ಕೂ ಚುನಾವಣೆ ಚುನಾವಣೆ ಎಂದುಕೊಂಡು ಹಣ ಸಮಯ ಗುಂಪುಗಾರಿಕೆ ಮಾಡಿಕೊಳ್ಳುವ ಇಂದಿನ ವ್ಯವಸ್ಥೆಯ ನಡುವೆ ಎಪಿಎಫ್ ನೌಕರರ ಒಗ್ಗಟ್ಟು ನಿಜಕ್ಕೂ ಇತರ ಇಲಾಖೆಗಳಿಗೆ ಮಾದರಿಯಾಗಿದ್ದು ನೂತನವಾಗಿ ಆಯ್ಕೆಯಾದ ಎಲ್ಲರಿಗೂ ಸುದ್ದಿ ಸಂತೆ ವೇಬ್ ನ್ಯೂಸ್ ಪರವಾಗಿ ಅಭಿನಂದನೆಗಳು ಹಾಗೇ ಉತ್ತಮವಾಗಿ ಕೆಲಸ ಮಾಡಿ ಎಲ್ಲರ ಹಿತ ಕಾಪಾಡಲಿ ಎಂಬುದು ನಮ್ಮ ಎಲ್ಲಾ ನೌಕರರ ಆಶಯ.