ಧಾರವಾಡದ ಹಂಗರಕಿ ಗ್ರಾಮದಲ್ಲಿ ಶವ ಪತ್ತೆ – ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರಿಗುಳಪ್ಪ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆ

Suddi Sante Desk

ಧಾರವಾಡ

ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಯೊಬ್ಬ ಶವವಾಗಿ ಪತ್ತೆಯಾದ ಘಟನೆ ಧಾರವಾಡದ ಹಂಗರಕಿ ಗ್ರಾಮದಲ್ಲಿ ನಡೆದಿದೆ.ಹಂಗರಕಿ ಗ್ರಾಮದ ಕರಿಗುಳಪ್ಪ ನೇಗಿನಹಾಳ ಎಂಬುವರು ನಾಪತ್ತೆಯಾಗಿದ್ದರು ಈ ಕುರಿತಂತೆ ಕುಟುಂಬದವರು ಗರಗ ಪೊಲೀಸ್ ಠಾಣೆ ಯಲ್ಲಿ ದೂರನ್ನು ದಾಖಲು ಮಾಡಿದ್ದರು.ದೂರನ್ನು ದಾಖಲು ಮಾಡಿಕೊಂಡು ತನಿಖೆ ಮಾಡುತ್ತಿದ್ದ ಗರಗ ಪೊಲೀಸರಿಗೆ ಇಂದು ತಡಕೋಡ ಗ್ರಾಮದ ರಸ್ತೆಯಲ್ಲಿನ ಸಂಪತ್ ಕುಮಾರ ದೇಸಾಯಿ ಎಂಬುವರ ಕಬ್ಬಿನ ಗದ್ದೆ ಯಲ್ಲಿ ಕರಿಗುಳಪ್ಪ ಶವವಾಗಿ ಪತ್ತೆಯಾಗಿದ್ದಾನೆ

ಇನ್ನೂ ಸುದ್ದಿ ತಿಳಿದ ಗರಗ ಪೊಲೀಸ್ ಠಾಣೆಯ ಪಿಎಸ್ಐ ಕಿರಣಕುಮಾರ ಮೋಹಿತೆ ಮತ್ತು ಸಿಬ್ಬಂದಿ ಯವರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದರು.ಈ ಕುರಿ ತಂತೆ ದೂರನ್ನು ದಾಖಲು ಮಾಡಿಕೊಂಡಿದ್ದು ಇದೊಂದು ಆತ್ಮಹತ್ಯೆನಾ ಅಥವಾ ಕೊಲೆನಾ ಎಂಬ ಕುರಿತಂತೆ ತನಿಖೆ ಯನ್ನು ಮಾಡುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.