ಧಾರವಾಡ –
ಅಪರಿಚಿತ ವ್ಯಕ್ತಿಯ ಶವವೊಂದು ಧಾರವಾಡದ ಹೊರವಲಯದಲ್ಲಿ ಪತ್ತೆಯಾಗಿದೆ. ಧಾರವಾಡದ ಹೊರವಲಯದ ಹಳಿಯಾಳ ರಸ್ತೆಯ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನಸೂರು ಗ್ರಾಮದ ಹದ್ದಿನಲ್ಲಿನ ಜಮೀನೊಂದರಲ್ಲಿ ಶವವೊಂದು ಪತ್ತೆಯಾಗಿದೆ. ಈ ಅಪರಿಚಿತ ವ್ಯಕ್ತಿಯೊಬ್ಬನ ಶವ ನೋಡಿದ ರೈತರು ಧಾರವಾಡ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೇ ಆಗಮಿಸಿದ ಧಾರವಾಡ ಗ್ರಾಮೀಣ ಪೊಲೀಸರು ಪರಿಶೀಲನೆ ಮಾಡಿ ಅಕ್ಕ ಪಕ್ಕದ ಗ್ರಾಮಸ್ಥರನ್ನು ವಿಚಾರಣೆ ಮಾಡಿದ್ರು ಮೃತ ವ್ಯಕ್ತಿಯ ಕುರಿತು ಯಾವುದೇ ಹೆಸರು ಮಾಹಿತಿ ಲಭ್ಯವಾಗಿಲ್ಲ.

ಹೀಗಾಗಿ ವ್ಯಕ್ತಿಯ ಪೊಟೊದೊಂದಿಗೆ ಮಾಹಿತಿಯನ್ನು ಪೊಲೀಸರು ಪ್ರಕಟಣೆ ಮಾಡಿದ್ದಾರೆ. 60 ರಿಂದ 65 ವಯಸ್ಸಿನ ವ್ಯಕ್ತಿಯಾಗಿದ್ದು ಐದು ಅಡಿ ಎತ್ತರದ ವ್ಯಕ್ತಿಯ ವಿಳಾಸ ಹೆಸರು ತಿಳಿದುಬಂದಿರಿವುದಿಲ್ಲ.ದುಂಡು ಮಖ ಸಾದು ಗೆಂಪಿನ ಈ ವ್ಯಕ್ತಿಯ ಪರಿಚಯ ಗುರುತು ಇದ್ದರೆ ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆಗೆ ಇಲ್ಲವೇ ಧಾರವಾಡ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ಗೆ ತಿಳಿಸುವಂತೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಇನಸ್ಪೇಕ್ಟರ್ ಮಹೇಂದ್ರ ನಾಯಕ ಸಾರ್ವಜನಿಕರಿಗೆ ಕೋರಿದ್ದಾರೆ.