ಧಾರವಾಡ
ಬ್ರಿಟನ್ ನಿಂದ ಧಾರವಾಡ ಜಿಲ್ಲೆಗೆ 37 ಜನರು ಬಂದಿದ್ದಾರೆ. ಈಗಾಗಲೇ ಬಂದಿರುವ ಇವರೆಲ್ಲರ ಪರೀಕ್ಷೆಯನ್ನು ಮಾಡಲಾಗಿದ್ದು ಇದರಲ್ಲಿ 36 ಜನರ ರಿಪೋರ್ಟ್ ಗಳು ನೆಗೆಟಿವ್ ಬಂದಿವೆ.ಎಲ್ಲರ ರಿಪೋರ್ಟ್ ಗಳು ನೆಗೆಟಿವ್ ಬರುತ್ತಿದ್ದಂತೆ ಧಾರವಾಡ ಜಿಲ್ಲಾಡಳಿತ ನಿಟ್ಟಿಸಿರು ಬಿಟ್ಟಿತ್ತು ಆದರೆ ಬಂದವರಲ್ಲಿ ಒರ್ವ ವ್ಯಕ್ತಿ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.
ಒಂದು ಕಡೆ ಬ್ರಿಟನ್ ರೂಪಾಂತರ ವೈರಸ್ ಆತಂಕವಾದರೆ ಮತ್ತೊಂದು ಕಡೆ ನಗರಕ್ಕೆ ಬಂದವರಲ್ಲಿ ಒರ್ವ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಬ್ರಿಟನ್‌ನಿಂದ ಧಾರವಾಡಕ್ಕೆ ಬಂದಿದ್ದರು ಇವರು. ಸಧ್ಯ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಮೊಬೈಲ್ ನಂಬರ್ ಸಹ ಟ್ರೇಸ್ ಆಗುತ್ತಿಲ್ಲ ಆ ವ್ಯಕ್ತಿ ಹುಡಕಲು ಧಾರವಾಡ ಜಿಲ್ಲಾಧಿಕಾರಿಗಳಾದ ನಿತೀಶ್ ಪಾಟೀಲ್ ಅವರು ಪೊಲೀಸರಿಗೆ ಹೇಳಿದ್ದಾರಂತೆ.
ಆತನನ್ನು ಪೊಲೀಸರು ಹುಡುಕುತ್ತಿದ್ದು ಈಗಾಗಲೇ ಒಟ್ಟು 37 ಜನ ಬ್ರಿಟನ್‌ನಿಂದ ಧಾರವಾಡಕ್ಕೆ ಬಂದಿದ್ದಾರೆ ಆ ಪೈಕಿ 36 ಜನರ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದೆ ನಾಪತ್ತೆಯಾಗಿರುವ ವ್ಯಕ್ತಿಯ ಟೆಸ್ಟ್ ಮಾತ್ರ ಬಾಕಿ ಉಳಿದಿದೆ ಹೀಗಾಗಿ ಇವರೊಬ್ಬರನ್ನು ಟೆಸ್ಟ್ ಮಾಡಿಸಿದರೆ ದೊಡ್ಡ ತಲೆನೋವು ತಪ್ಪುತ್ತದೆ ಎಂದುಕೊಂಡಿದ್ದ ಧಾರವಾಡ ಜಿಲ್ಲಾಡಳಿತಕ್ಕೆ ಈಗ ಮತ್ತೊಂದು ತಲೆನೋವಾಗಿದೆ.