ಧಾರವಾಡ –
ಮಹಾಮಾರಿ ಕೋವಿಡ್ ಗೆ ಸಹೋದರರಿಬ್ಬರು ಸಾವಿಗೀಡಾದ ಘಟನೆ ಧಾರವಾಡದ ಮುಗದ ಗ್ರಾಮದಲ್ಲಿ ನಡೆದಿದೆ.ಗ್ರಾಮದಲ್ಲಿ ಸುಬ್ಬಪ್ಪಾ ದುರ ಗಪ್ಪಾ ಬೋವಿ ಮತ್ತು ಬರಮಪ್ಪಾ ದುರಗಪ್ಪಾ ಬೋವಿ ಮೃತರಾಗಿರುವ ಸಹೋದರರಾಗಿದ್ದಾರೆ.

ನಾಲ್ಕು ದಿನಗಳ ಹಿಂದೆ ಮೊದಲು ದುರಗಪ್ಪಾ ಬೋವಿ ಮೃತರಾದರೆ ಇನ್ನೂ ಇಂದು ಬರಮಪ್ಪಾ ಬೋವಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಒಂದೇ ಮನೆಯಲ್ಲಿ ಕೋವಿಡ್ ಗೆ ಮೃತರಾಗಿರುವ ಇಬ್ಬ ರನ್ನು ಕಳೆದುಕೊಂಡಿರುವ ಬೋವಿ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು ಗ್ರಾಮದಲ್ಲಿ ನೀರವ ಮೌನ ಕಂಡು ಬರುತ್ತಿದ್ದು ಇನ್ನೂ ಮೃತರಾದ ಇಬ್ಬರಿ ಗೆ ಮುಗದ ಗ್ರಾಮದ ಸಮಸ್ತ ಗುರು ಹಿರಿಯರು ಆಪ್ತರು ಬಂಧು ಬಳಗದವರು ಸಂತಾಪವನ್ನು ಸೂಚಿಸಿದ್ದಾರೆ

ಇವರೆಂದಿಗೆ ಮಂಜುನಾಥ್ ಜಕ್ಕಣ್ಣವರ್ ಕೆಆರ್ ಎಸ್ ಪಕ್ಷದ ಜಿಲ್ಲಾ ಅಧ್ಯಕ್ಷರು,ನಾಗರಾಜ್ ಗೂಡೆ ನವರ್ ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ.