ಧಾರವಾಡ –
RTO ಗೆ ನಿಲ್ಲಲಿಲ್ಲ ಎಂದು 100 ಬಸ್ ಚಾಲಕನಿಗೆ ನೊಟೀಸ್ ನೀಡಿದ BRTS ಅಧಿಕಾರಿಗಳು – ಯಾವ ಬಸ್ ನಿಲ್ಲುತ್ತದೆ ನಿಲ್ಲೊದಿಲ್ಲ ಎಂದು ಪರಿಜ್ಞಾನವಿಲ್ಲದ ಅಧಿಕಾರಿಗಳಿಂದ ಸಂಸ್ಥೆಗೆ ಕೆಟ್ಟ ಹೆಸರು…..ಒಂದು ತಿಂಗಳ ನಂತರ ಚಾಲಕನಿಗೆ ಬಂತು ಆಪಾದನಾ ಪತ್ರ……
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಚಾಲಕರಿಗೆ ಅಧಿಕಾರಿಗಳಿಂದ ಕಿರಿಕಿರಿ ಯಾಗುತ್ತಿದೆ ಎನ್ನೊದಕ್ಕೆ ಮತ್ತೊಂದು ಸಾಕ್ಷಿ ಹೌದು ಅವಳಿ ನಗರದ ಮಧ್ಯೆ ಚಿಗರಿ ಬಸ್ ಗಳು ಮೂರು ಹಂತಗಳಲ್ಲಿ ಸಂಚಾರವನ್ನು ಮಾಡುತ್ತಿವೆ.
100.2001,ಮತ್ತು 200A ಹೀಗೆ ಮೂರು ಮಾರ್ಗ ಗಳಲ್ಲಿ ಸಂಚಾರವನ್ನು ಮಾಡುತ್ತಿವೆ.ಸಾಮಾನ್ಯವಾಗಿ 100 ಚಿಗರಿ ಬಸ್ ವೇಗದೂತವಾಗಿದ್ದು ಧಾರವಾಡ ಗಾಂಧಿನಗರ,ಬಿಟ್ಟರೆ ಎಸ್ ಡಿಎಮ್ ,ನವನಗರ ದಲ್ಲಿ ನಿಲ್ಲುತ್ತದೆ ಈ ಒಂದು ವಿಷಯ ಎಲ್ಲರಿಗೂ ಗೊತ್ತಿದೆ ಆದರೆ ಇದು ಬಹುಶಃ ಚಿಗರಿ ಬಸ್ ಅಧಿಕಾರಿಗಳಿಗೆ ಗೊತ್ತಿಲ್ಲ ಎಂಬಂತೆ ಕಾಣುತ್ತಿದೆ ಇದಕ್ಕೆ ಸಾಕ್ಷಿ ಸಧ್ಯ 100 ಬಸ್ ಚಾಲಕರೊಬ್ಬರಿಗೆ RTO ಗೆ ಬಸ್ ನಿಲ್ಲಲಿಲ್ಲ ಎಂಬ ಕಾರಣಕ್ಕಾಗಿ ಮೆಮೊವನನ್ನು ನೀಡಿರುವ ವಿಚಾರ.
ಒಂದು ಕಡೆ ಚಿಗರಿ ಬಸ್ ಗಳು ಆರಂಭಗೊಂಡು ಆರು ವರ್ಷಗಳಿಂದ ಹೆಚ್ಚಾಗಿದ್ದು ಹೀಗಿರುವಾಗ ಬಸ್ ಗಳ ನಿರ್ವಹಣೆ ಸರಿಯಾಗಿಲ್ಲ ವ್ಯವಸ್ಥೆ ಸರಿಯಾಗಿಲ್ಲ ಡಿಸಿ ಸಿದ್ದಲಿಂಗಯ್ಯ ಬಂದ ಮೇಲೆ ಚಾಲಕರಿಗೆ ಸಾಕಷ್ಟು ಪ್ರಮಾಣದಲ್ಲಿ ಕಿರಿಕಿರಿಯಾಗುತ್ತಿದೆ ಎಂಬೊದಕ್ಕೆ ಮೇಲಿಂದ ಮೇಲೆ ಕಂಡು ಬರುತ್ತಿರುವ ಇಂತಹ ಎಡವಟ್ಟುಗಳೇ ಸಾಕ್ಷಿ. ಹೀಗಿರುವಾಗ ಮತ್ತೆ ಇಂತಹ ನೊಟೀಸ್, ಮೆಮೊಗಳ ಕಿರಿಕಿರಿ ಯಾಗುತ್ತಿದೆ.
ಸಾಮಾನ್ಯವಾಗಿ ಚಾಲಕರಿಗೆ ಕಿರುಕುಳ ವನ್ನು ಅಧಿಕಾರಿಗಳು ಎಷ್ಟರ ಮಟ್ಟಿಗೆ ನೀಡುತ್ತಿದ್ದಾರೆ ಎನ್ನೊದಕ್ಕೆ ಈ ಒಂದು ನೊಟೀಸ್ ಸಾಕ್ಷಿಯಾಗಿದೆ. RTO ನಿಲ್ದಾಣಕ್ಕೆ ಯಾವ ಬಸ್ ನಿಲ್ಲುತ್ತದೆ ನಿಲ್ಲೊದಿಲ್ಲ ಎಂಬ ಒಂದೇ ಒಂದು ಸಾಮಾನ್ಯ ತಿಳುವಳಿಕೆ ಇಲ್ಲದ ಅಧಿಕಾರಿ ಗಳು ಸಂಸ್ಥೆಯಲ್ಲಿ ಇದ್ದಾರೆ ಎಂದರೆ ನೋಡಿ ಹೇಗಿದೆ ಪರಸ್ಥಿತಿ.
ಅಕ್ಟೋಬರ್ 9 ರಂದು ಮಧ್ಯಾಹ್ನ 3 ಗಂಟೆ 27 ನಿಮಿಷಕ್ಕೆ KA 25,F 3499 ಸಂಖ್ಯೆಯ 100 ಬಸ್ RTO ನಿಲ್ಲಾಣದಲ್ಲಿ ನಿಂತುಕೊಂಡಿಲ್ಲವಂತೆ ಇದು ವೇಗದೂತ ಬಸ್ ಆಗಿದ್ದು RTO ನಿಲ್ದಾಣದಲ್ಲಿ ನಿಲುಗಡೆ ಇಲ್ಲ ಇದನ್ನು ತಿಳಿದುಕೊಳ್ಳದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗದ ವಿಭಾಗೀಯ ಸಂಚಾರ ಅಧಿಕಾರಿಗಳು ಈ ಒಂದು ನೊಟೀಸ್ ನ್ನು ಚಾಲಕರಿಗೆ ನೀಡಿದ್ದಾರೆ.ಅದು ಘಟನೆ ನಡೆದು ಒಂದು ತಿಂಗಳ ನಂತರ ನೊಟೀಸ್ ನ್ನು ಚಾಲಕನಿಗೆ ನೀಡಿದ್ದಾರೆ.
ಒಂದು ತಿಂಗಳ ನಿದ್ದೇಯಲ್ಲಿದ್ದ ಅಧಿಕಾರಿಗಳು ಯಾವ ಬಸ್ ನಿಲ್ಲತ್ತದೆ ನಿಲ್ಲೊದಿಲ್ಲ ಎಂದ ಸಾಮಾನ್ಯ ತಿಳುವ ಳಿಕೆ ಪರಿಜ್ಞಾನವಿಲ್ಲದೇ ಚಾಲಕನ ಕರ್ತವ್ಯದ ಮೇಲೆ ಆಪಾದನೆ ಮಾಡಿದಲ್ಲದೇ ಯಾರೋ ಪ್ರಯಾಣಿಕರು ದೂರು ಸಲ್ಲಿಸಿರುತ್ತಾರೆ ಎಂದು ನಿದ್ದೇಯಲ್ಲಿದ್ದವರು ಥಟ್ ಅಂತಾ ಎದ್ದು ಹಿಂದೆ ಮುಂದೆ ನೋಡದೆ ಸಧ್ಯ ನೊಟೀಸ್ ನೀಡಿದ್ದಾರೆ.ನೀವು ಕರ್ತವ್ಯದಲ್ಲಿ ನಿಷ್ಕಾಳಜೀ ತನ ಅಲ್ಲದೇ ಪ್ರಯಾಣಿಕರಿಗೆ ತೊಂದರೆ ಕೊಟ್ಟಿದ್ದಿರಾ ಮತ್ತು ಸಂಸ್ಥೆಯ ಶಿಸ್ತು ನಿಯಮಾವಳಿ ಆದೇಶವನ್ನು ಉಲ್ಲೇಂಘನೆ ಮಾಡಿ ಕೆಟ್ಟ ಹೆಸರು ಬರುವಂತೆ ಕಾರಣ. ರಾಗಿದ್ದೀರಿ ಎಂದು ಉಲ್ಲೇಖ ಮಾಡಿದ್ದಲ್ಲದೇ
ಅನೇಕ ಬಾರಿ ತಿಳಿ ಹೇಳಿದರು ಕೂಡಾ ಸುಧಾರಣೆ ಕಂಡು ಬಂದಿಲ್ಲ ಹೀಗಾಗಿ ನಿಮ್ಮ ಮೇಲೆ ಶಿಸ್ತು ಕ್ರಮ ಯಾಕೆ ಕೈಗೊಳ್ಳಬಾರದು ಎಂದು ಆಪಾದನೆ ಪತ್ರ ನೀಡಿದ್ದಾರೆ ಸಧ್ಯ ಈ ಒಂದು ಎಡವಟ್ಟು ಆಪಾದನಾ ಪತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಇದರಿಂದಾಗಿ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ.
ಇದೇಲ್ಲಾ ಸರಿ ಆದರೆ ಈ ಒಂದು ಬಸ್ ಅಲ್ಲಿ ನಿಲ್ಲೊದಿಲ್ಲ ಅಂತಾ ನಿಮಗೆ ಗೊತ್ತಿಲ್ವಾ ಮೊದಲು ಅದನ್ನು ವಿಚಾರ ಮಾಡಿ ತಿಳಿದುಕೊಳ್ಳಬೇಕಾದ ನಿಮಗೆ ಮಾಹಿತಿ ಇಲ್ಲದೇ ಹೀಗೆ ಬೇಕಾಬಿಟ್ಟಿಯಾಗಿ ಚಾಲಕನ ಕರ್ತವ್ಯದ ಮೇಲೆ ವಿನಾಕಾರಣ ಆಪಾದನೆಯನ್ನು ಮಾಡಿ ಒಂದು ತಿಂಗಳ ನಂತರ ಮೆಮೊ ನೀಡಿದ್ದಲ್ಲದೇ ಸಂಸ್ಥೆಯ ನಿಯಮಗ ಳನ್ನು ಗಾಳಿಗೆ ತೂರಿ ಸಂಸ್ಥೆಗೆ ಕೆಟ್ಟ ಹೆಸರು ತಂದಿರುವ ನಿಮ್ಮ ಮೇಲೆ ಯಾರು ಶಿಸ್ತು ಕ್ರಮವನ್ನು ಕೈಗೊಳ್ಳಬೇಕು
ನೀವು ಮಾಡಿದ್ದೇ ಸರಿನಾ ನೀವು ಆಡಿದ್ದೇ ಆಟ ಸರಿನಾ ನಿಮಗೆ ಯಾರು ಹೇಳೊರು ಕೇಳೊರು ಇಲ್ವಾ ಏನಿದು ಡಿಸಿಯವರೇ ವಿನಾಕಾರಣ ಚಾಲಕರಿಗೆ ತಪ್ಪ ಇಲ್ಲದಿದ್ದ ರೂ ಕೂಡಾ ಮೆಮೊ ನೀಡುವುದು ನಿಮ್ಮ ಹವ್ಯಾಸನಾ ಒಂದು ಮೆಮೊ ರೆಡಿ ಮಾಡೊದು ಚಾಲಕರ ಹೆಸರು. ನಂಬರ್ ಹಾಗೆ ಬಸ್ ನಂಬರ್ ಅಷ್ಟೇ ಬದಲಾವಣೆ ಮಾಡಿ Cut And Paste ಮಾಡೊದು ಇದೇ ಸಧ್ಯ ನಡೆಯುತ್ತಿದೆ
ಚಾಲಕ ಏನು ತಪ್ಪು ಮಾಡಿದ್ದಾರೆ ಮಾಡಿದ್ದಾರೆಯೇ ಇಲ್ಲ ನೊಡುವಷ್ಟ ಪರಿಶೀಲನೆ ಮಾಡುವಷ್ಟು ವ್ಯವದಾ ನವಿಲ್ಲದ ಅಧಿಕಾರಿಗಳು ಹೇಗೆ ಕರ್ತವ್ಯ ಮಾಡುತ್ತಿದ್ದಾರೆ ಇಂತವರಿಂದಲೇ ಸಂಸ್ಥೆಗೆ ಹೇಗೆ ಕೆಟ್ಟ ಹೆಸರು ಬರತಾ ಇದೆ ಹೀಗೆ ಕಿರಿಕಿರಿಯಾಗುತ್ತಿದೆ ಒಮ್ಮೇ ನೋಡಿ ವ್ಯವಸ್ಥಾಪಕ ನಿರ್ದೇಶಕರೇ ಸಾರಿಗೆ ಸಚಿವರೇ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..