ಹುಬ್ಬಳ್ಳಿ –
BRTS ಗೆ ಖಡಕ್ ಮಹಿಳಾ IAS ಅಧಿಕಾರಿ…..ಸಿಗಲಿದೆ ಬದಲಾವಣೆಯ ಹೊಸ ಸ್ಪರ್ಶ…..ಮೊದಲು ಚಾಲಕ ರೊಂದಿಗೆ ಸಭೆ ಮಾಡಿ DC ಯವರ ಕಾರ್ಯವೈಖರಿ ನೋಡಿ
ಹೌದು ಹುಬ್ಬಳ್ಳಿ ಧಾರವಾಡ ಬಿಆರ್ ಟಿಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಖಡಕ್ ಮಹಿಳಾ ಐಎಎಸ್ ಅಧಿಕಾರಿ ಶ್ರೀಮತಿ ಪ್ರೀಯಾಂಗ ಎಮ್ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.NWKRTC ಯ MD ಯಾಗಿರುವ ಶ್ರೀಮತಿ ಪ್ರೀಯಾಂಗ ಎಮ್. ಇವರಿಗೆ ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಕಂಪನಿ ವ್ಯವಸ್ಥಾಪಕ ನಿದೇಶಕರ ಹುದ್ದೆಯನ್ನು ಹೆಚ್ಚುವರಿಯ ನ್ನಾಗಿ ನೀಡಿ ಆದೇಶವನ್ನು ಮಾಡಿದೆ.
ಈ ಹಿಂದೆ ಈವರೆಗೆ ಚಿಗರಿ ಮತ್ತು ವಾಯವ್ಯ ಸಾರಿಗೆ ಸಂಸ್ಥೆ ಎರಡನ್ನು ಒಬ್ಬ ಅಧಿಕಾರಿ ನೋಡಿಕೊಳ್ಳುತ್ತಿ ದ್ದರು ಕಳೆದ ಬಾರಿ ಅಷ್ಟೇ BRTS ಗೆ ಪ್ರತ್ಯೇಕ MD ಹುದ್ದೆ ಸೃಷ್ಟಿಸಿ ಶಿವಾನಂದ ಭಜಂತ್ರಿ ಅಧಿಕಾರಿ ವಹಿಸಿದ್ದರು ಸದ್ಯ ರಾಜ್ಯ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಅಧಿಕಾರವನ್ನು ಸ್ವೀಕಾರ ಮಾಡಿದರು.ಶ್ರೀಮತಿ ಪ್ರೀಯಾಂಗ ಎಮ್ ಇವರಿಗೆ ಹೆಚ್ಚುವರಿ ಪ್ರಭಾರ ಹುದ್ದೆಯನ್ನು ನೀಡಲಾಗಿದೆ.
ಕಳೆದ ಕೆಲ ದಿನಗಳಿಂದ ಸಂಪೂರ್ಣವಾಗಿ ಹಾಳಾಗುವ ಸ್ಥಿತಿಗೆ ಚಿಗರಿ ಬಸ್ ಗಳು ಬಂದಿದ್ದು ಪ್ರಮುಖವಾಗಿ ಸರಿಯಾದ ನಿರ್ವಹಣೆ ವ್ಯವಸ್ಥೆ ಇಲ್ಲದೇ ಬೇಕಾ ಬಿಟ್ಟಿಯಾಗಿ ಚಾಲಕರನ್ನು ಅಮಾನತು ಮಾಡೊದು ಇದೆಲ್ಲ ದರಿಂದಾಗಿ ಚಾಲಕರು ಬೇಸತ್ತಿದ್ದು ವರ್ಗಾವಣೆ ಕೇಳುತ್ತಿದ್ದು ಈಗಷ್ಟೇ ಡಿಸಿ ಯಾಗಿ ಬಂದಿರುವ ಸಿದ್ದಲಿಂಗಯ್ಯ ಅವರ ಕಾರ್ಯವೈಖರಿ ಯಿಂದಾಗಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ
ಇದೆಲ್ಲ ದ ನಡುವೆ ಸಧ್ಯ ಇಲಾಖೆಗೆ ಶ್ರೀಮತಿ ಪ್ರೀಯಾಂಗ ಎಮ್ ಅವರು ಅಧಿಕಾರ ವಹಿಸಿಕೊಂಡಿದ್ದು ಇಲಾಖೆ ಗೆ ಚಾಲಕರಿಗೆ ಹೊಸ ಶಕ್ತಿ ಬಂದಂತಾಗಿದೆ.ಸರಿಯಾಗಿ ಬಸ್ ಗಳನ್ನು ನಿರ್ವಹಣೆ ಮಾಡದೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡದೆ ಚಾಲಕರ ಮೇಲೆ ಶಿಸ್ತು ಕ್ರಮ ಶಿಸ್ತು ಕ್ರಮ ಎನ್ನುತ್ತಿರುವ ಡಿಸಿಯವರ ಕಾರ್ಯವೈಖರಿ ಗೆ ಬ್ರೇಕ್ ಹಾಕಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿ ಹಾಳಾಗಿರುವ ಬಸ್ ಗಳನ್ನು ಅಭಿವೃದ್ಧಿ ಮಾಡಿ ಚಾಲಕರು ಸಂತೋಷ ದಿಂದ ಕರ್ತವ್ಯ ಮಾಡುವ ವಾತಾವರಣ ನಿರ್ಮಾಣವಾಗಲಿ ಆ ಒಂದು ನಿರೀಕ್ಷೆ ಯಲ್ಲಿ ಚಾಲಕರಿದ್ದಾರೆ
ಅಧಿಕಾರವನ್ನು ವಹಿಸಿಕೊಂಡ ಬೆನ್ನಲ್ಲೇ ಬಿಆರ್ ಟಿಎಸ್ ಅಧಿಕಾರಿಗಳೊಂದಿಗೆ ಸಭೆಯನ್ನು ಮಾಡಿ ಕೆಲವೊಂ ದಿಷ್ಟು ವಿಚಾರಗಳ ಕುರಿತಂತೆ ಸಭೆಯನ್ನು ಮಾಡಿ ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಡಿಸಿ ಯವರಿಗೆ ಸೇರಿದಂತೆ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿರುವ MDಯವರು ಬಾಡುತ್ತಿರುವ ಚಿಗರಿಯನ್ನು ಚಿಗರಿಸಿ ಮೊಂಡು ಅಧಿಕಾರಿಗಳಿಗೆ ಕಿವಿ ಹಿಂಡಲಿ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..