ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಈ ಒಂದು ಅವೈಜ್ಞಾನಿಕವಾದ ವರ್ಗಾವಣೆಯ ನೀತಿಯಿಂದಾಗಿ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಕುಟುಂಬ ದವರನ್ನು ಬಿಟ್ಟು ದಿಕ್ಕಾಪಾಲಾಗಿ ಕೆಲಸವನ್ನು ಮಾಡ್ತಾ ಇದ್ದಾರೆ.ದಿಕ್ಕಿಗೊಬ್ಬರಂತೆ ಇದ್ದುಕೊಂಡು ದಿಕ್ಕಾಪಾಲಾಗಿ ಸಧ್ಯ ಕರ್ತವ್ಯವನ್ನು ಮಾಡುತ್ತಿದ್ದು ಇವರ ನೋವು ಸಮಸ್ಯೆ ಯಾರಿಗೂ ಕಾಣುತ್ತಿಲ್ಲ ಕೇಳುತ್ತಿಲ್ಲ ಕಳೆದ ವಾರವಷ್ಟೇ ಈ ಕುರಿತಂತೆ ಬೆಂಗಳೂರು ಚಲೋ ಮಾಡಿದರು ಕೂಡಾ ಬೇಡಿಕೆಗಳು ಮಾತ್ರ ಈಡೇರಲಿಲ್ಲ ಭರವಸೆ ಸಿಕ್ಕಿತು ಮಾತ್ರ. ಹೀಗಾಗಿ ಸಧ್ಯ ಮತ್ತೆ ಈ ಕುರಿತಂತೆ ಹೋರಾಟವನ್ನು ತೀವ್ರ ಗೊಳಿಸಲು ಮುಂದಾಗಿದ್ದು ಹೀಗಾಗಿ ನಾಳೆಯಿಂದ ಆರಂಭ ವಾಗಲಿರುವ ಕಲಿಕಾ ಚೇತರಿಕಾ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿಯನ್ನು ಧರಿಸಿಕೊಂಡು ಪ್ರತಿಭಟನೆ ಮಾಡುತ್ತಾ ಬೇಡಿಕೆ ಈಡೇರಿಕೆಗೆ ಕರೆ ನೀಡಿದ್ದಾರೆ.
ಆತ್ಮೀಯ ವರ್ಗಾವಣೆ ವಂಚಿತ ಶಿಕ್ಷಕ ಮಿತ್ರರಲ್ಲಿ ಮನವಿ ನಾಳೆಯಿಂದ ರಾಜ್ಯದಾದ್ಯಂತ ಬೇರೆ ಬೇರೆ ದಿನಾಂಕಗಳಲ್ಲಿ ತಾಲೂಕು ಕೇಂದ್ರಗಳಲ್ಲಿ ಕಲಿಕಾ ಚೇತರಿಕೆ ತರಬೇತಿ ಜರು ಗುತಿದ್ದು ದಯಮಾಡಿ ಎಲ್ಲಾ ವರ್ಗಾವಣೆ ವಂಚಿತ ಶಿಕ್ಷಕರು ನಾವು ಬೆಂಗಳೂರಿಗೆ OTS ವರ್ಗಾವಣೆ ಸಂಬಂಧಿತ ಹೋರಾಟದಲ್ಲಿ ಭಾಗವಹಿಸುವ ಪೂರ್ವಭಾವಿಯಾಗಿ ಮಾಧ್ಯಮ.ಸರ್ಕಾರ.ನಮ್ಮ ಪ್ರತಿನಿಧಿಗಳು ಹಾಗೂ ಅಧಿಕಾ ರಿಗಳ ಗಮನ ಸೆಳೆಯುವ ಸಲುವಾಗಿ ತರಬೇತಿಯಲ್ಲಿ ಕಪ್ಪುಪಟ್ಟಿ ಧರಿಸುವ ಮೂಲಕ ನಮ್ಮ ಪ್ರತಿಭಟನೆಯನ್ನು ಹೊರಹಾಕಲು ಈ ಮೂಲಕ ಎಲ್ಲಾ ವರ್ಗಾವಣೆ ವಂಚಿತ ಶಿಕ್ಷಕ ಮಿತ್ರರಲ್ಲಿ ಮನವಿ ಮಾಡಿಕೊಳ್ಳುತ್ತೇವೆ.ಅಲ್ಲದೆ ಇದೆ ಸಂಧರ್ಭದಲ್ಲಿ ನಿಮ್ಮ ಸೇವಾವಿವರ ಹಾಗೂ ಯಾವ ಜಿಲ್ಲೆಗೆ ವರ್ಗಾವಣೆ ಬಯುಸುವುದು ಎಂಬುವ ಮಾಹಿತಿಯನ್ನು ಸಹ ಖುದ್ದಾಗಿ ಪಡೆಯಲಾಗುತ್ತದೆ..ದಯಮಾಡಿ ಸಹಕರಿಸಿ ಎಂದು ಸಂದೇಶದಲ್ಲಿ ಉಲ್ಲೇಖವನ್ನು ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ಕರೆ ನೀಡಿದ್ದಾರೆ.