ಹುಬ್ಬಳ್ಳಿ
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನರಿಗಾಗಿ ಮಹಾನಗರ ಪಾಲಿಕೆ ಯಿಂದ ಮೇಯರ್ ಜೊತೆ ಮಾತುಕತೆ ಕಾರ್ಯಕ್ರಮ ವನ್ನು ಮಾಡಲಾಗುತ್ತಿದೆ ಹೌದು ನೂತನ ವರ್ಷದಂದು ವಿನೂತನ 2ನೇ ಜನಪರ ಕಾರ್ಯಕ್ರಮವನ್ನು ಪಾಲಿಕೆಯ ವತಿಯಿಂದ ಮಾಡಲಾಗುತ್ತಿದ್ದು ಕುಡಿಯುವ ನೀರು, ಕಸ ವಿಲೇವಾರಿ, ರಸ್ತೆ, ಬೀದಿದೀಪ, ಒಳಚರಂಡಿ ಸೇರಿದಂತೆ ತಮ್ಮ ತಮ್ಮ ವಾರ್ಡ್ ಸಮಸ್ಯೆಗಳ ಜೊತೆಗೆ ವೈಯಕ್ತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಈ ಒಂದು ಕಾರ್ಯಕ್ರಮ ಮಾಡಲಾಗುತ್ತಿದೆ
ಪ್ರತಿ ತಿಂಗಳು ಮೊದಲ ಬುಧವಾರ ಈ ಒಂದು ಕಾರ್ಯಕ್ರಮ ಮಾಡಲಾಗುತ್ತಿದ್ದು 12/02/2025 ರಂದು ಬೆಳಿಗ್ಗೆ 11ರಿಂದ 12 ಘಂಟೆಯ ವರೆಗೆ ಮೇಯರ್ ಜೊತೆ ಮಾತುಕತೆ ಎಂಬ ವಿನೂತನ ಕಾರ್ಯಕ್ರಮವು ಪಾಲಿಕೆ ವತಿಯಿಂದ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಜನರು ಕರೆ ಮಾಡಿ ನೇರವಾಗಿ ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತರಬಹುದು. ಮತ್ತು ಅವರ ಎಲ್ಲಾ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು.
ಮೇಯರ್ ಜೊತೆ ಮಾತುಕತೆ ಎಂಬ ಈ ಕಾರ್ಯ ಕ್ರಮವನ್ನು, ಪ್ರತಿ ತಿಂಗಳು ಮೊದಲ ಬುಧವಾರದಂದು ಹಮ್ಮಿಕೊಳ್ಳಲಾಗುವುದು, *8277802331*82778 02334 ಸಂಖ್ಯೆಗೆ ಕರೆ ಮಾಡುವ ಮೂಲಕ, ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೇ, ಹುಬ್ಬಳ್ಳಿ – ಧಾರವಾಡದ ಸಮಗ್ರ ಅಭಿವೃದ್ಧಿಯ ಕುರಿತು ತಮ್ಮ ಅನಿಸಿಕೆ. ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಬ ಹುದು ಎಂದು ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..