ಸರ್ಕಾರದ ನಿಯಮಾನುಸಾರ ಅನುಮತಿ ಪಡೆಯದೇ ಶಾಲೆಯನ್ನು ಪ್ರಾರಂಭಿಸಿದ್ದ ಎರಡು ಶಾಲೆಗಳ ಅನುಮತಿಯನ್ನು ಹುಬ್ಬಳ್ಳಿಯಲ್ಲಿ ರದ್ದು ಮಾಡಲಾಗಿದೆ.
ಹುಬ್ಬಳ್ಳಿ ಲೋಹಿಯಾ ನಗರದ ರೇಣುಕಾ ಎಜ್ಯುಕೇಶನ್ ಟ್ರಸ್ಟ್ ನ ರೇಣುಕಾ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಕಾರವಾರ ರಸ್ತೆ ಅಪ್ಪಾ ಎಜ್ಯಕೇಶನ್ ಸೊಸೈಟಿ ಅಪ್ಪಾ ಕಿರಿಯ ಪ್ರಾಥಮಿಕ ಶಾಲೆ ನೋಂದಣಿಯನ್ನು ರದ್ದುಗೊಳಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಸದರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಮಕ್ಕಳ ಪಾಲಕರು ಮಕ್ಕಳನ್ನು 2020-21ನೇ ಸಾಲಿಗೆ ಸಮೀಪದ ಸರಕಾರಿ, ಅನುದಾನಿತ ಅಥವಾ ಅನುದಾನರಹಿತ ಶಾಲೆಗಳಿಗೆ ದಾಖಲ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.