ಕಾರು ಟಾಟಾ ಎಎಸ್ ಮುಖಾಮುಖಿ ಡಿಕ್ಕಿ – ಒರ್ವ ಸಾವು

Suddi Sante Desk

ಅಣ್ಣಿಗೇರಿ –

ಕಾರು ಮತ್ತು ಟಾಟಾ ಎಎಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಒರ್ವ ಸಾವಿಗೀಡಾದ ಘಟನೆ ಧಾರವಾಡದ ಅಣ್ಣಿಗೇರಿಯಲ್ಲಿ ನಡೆದಿದೆ.

ಭದ್ರಾಪೂರದ ಟೋಲ್ ಬಳಿ ಈ ಒಂದು ಅಪಘಾತವಾಗಿದ್ದು ಕಾರು ಮತ್ತು ಟಾಟಾ ಎಎಸ್ ಗಳ ನಡುವೆ ಈ ಒಂದು ಮುಖಾಮುಖಿ ಡಿಕ್ಕಿಯಾಗಿದೆ.

ಟಾಟಾ ಎಎಸ್ ನಲ್ಲಿದ್ದ ಚಾಲಕ ಪಡಿಯಪ್ಪ ದ್ಯಾಮಪ್ಪ ತಲವಾರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲಿ ಸಾವಿಗೀಡಾಗಿದ್ದಾರೆ.

ಇನ್ನೂ ಕಾರಿನಲ್ಲಿದ್ದ ಒಂದಿಬ್ಬರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರನ್ನು ಶಿವಲಿಂಗ ವೀರಪ್ಪ ಹಡಪದ ಅತಿ ಬಮವೇಗವಾಗಿ ನಿರ್ಲಕ್ಷ್ಯದಿಂದ ಚಲಾವಣೆ ಮಾಡುತ್ತಾ ಓವರ್ ಟೇಕ್ ಮಾಡುವ ಸಮಯದಲ್ಲಿ ಮುಂದೆ ಬರುತ್ತಿದ್ದ ಟಾಟಾ ಎಎಸ್ ಗೆ ಡಿಕ್ಕಿ ಹೊಡೆದಿದ್ದಾರೆ.

ಇನ್ನೂ ವಿಷಯ ತಿಳಿದ ಅಣ್ಣಿಗೇರಿ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತಂತೆ ಕಾರು ಚಾಲಕನ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮಕೈಗೊಂಡಿದ್ದು ಇನ್ನೂ ಅಪಘಾತಕ್ಕೆ ಎರಡು ವಾಹನಗಳ ಮುಂದಿನ ಭಾಗ ನುಜ್ಜು ಗುಜ್ಜಾಗಿವೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.