ದಾವಣಗೆರೆ –
ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯವ್ಯಾಪಿ ಸಾರಿಗೆ ಇಲಾಖೆಯ ನೌಕರರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜ್ಯವ್ಯಾಪಿ ಇಲಾಖೆಯ ನೌಕರರು ಬೀದಿಗಿಳಿದು ಹೋರಾಟವನ್ನು ಮಾಡ್ತಾ ಇದ್ದಾರೆ. ಸಾರಿಗೆ ನೌಕರರನ್ನು ಮನವೊಲಿಸದೇ ಇನ್ನೂ ಇತ್ತ ದಾವಣಗೇರಿಯಲ್ಲಿ ನಾಲ್ಕು ಜನ ನೌಕರರ ಮೇಲೆ ದೂರು ದಾಖಲು ಮಾಡಲಾಗಿದೆ.
ಹೌದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಕಾರಣಕ್ಕಾಗಿ ನಾಲ್ಕು ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.ದಾವಣಗೆರೆಯಲ್ಲಿ ಸಾರಿಗೆ ಬಸ್ ಸಂಚಾರಕ್ಕೆ ಹೋರಾಟನಿರತ ನಾಲ್ವರ ಸಿಬ್ಬಂದಿ ಅಡ್ಡಿಪಡಿಸಿದ್ದಾರೆ ಎಂದುಕೊಂಡ ಅಧಿಕಾರಿಗಳು ನಾಲ್ಕು ಜನ ನೌಕರರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.
ನಾಲ್ವರು ಇಲಾಖೆ ಸಿಬ್ಬಂದಿಯ ಮೇಲೆ ದಾವಣಗೆರೆ ಡಿಪೋ ಮ್ಯಾನೇಜರ್ ರಾಮಚಂದ್ರಪ್ಪ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ದಾವಣಗೆರೆ ಹರಿಹರ ಮಾರ್ಗದಲ್ಲಿ ಸಂಚಾರಕ್ಕೆ ಸಜ್ಜಾಗಿದ್ದ ಬಸ್ ನಲ್ಲಿದ್ದ ಬಸ್ ನ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ಹಲ್ಕೆ ನಡೆಸಿದ್ದಾರೆ.
ಎಲ್ಲರೂ ಪ್ರತಿಭಟನೆ ನಡೆಸುತ್ತಿರುವಾಗ ನೀನು ಹೇಗೆ ರೂಟ್ ಗೆ ಹೋಗುತ್ತಿಯಾ ಎಂದು ಪ್ರತಿಭಟನಾ ನಿರತ ಸಿಬ್ಬಂದಿ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಈ ಬಗ್ಗೆ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಡಿಪೋ ಮ್ಯಾನೇಜರ್ ಪ್ರಕರಣ ದಾಖಲು ಮಾಡಿದ್ದಾರೆ.
ಹೀಗಾಗಿ ಪ್ರತಿಭಟನಾನಿರತ ಸಿಬ್ಬಂದಿಗೆ ಈಗ ಮತ್ತೊಂದು ಆತಂಕ ಶುರುವಾಗಿದೆ.ಚಾಲಕರಾದ ಓಂಕಾರಪ್ಪ,ಸಂತೋಸಸ,ಸೇವನಿಕಾ,ಹೊಸೂರಪ್ಪ, ಮೂವರು ಚಾಲಕರ ಚಾಲಕರು ಒರ್ವ ಸರ್ಕಾರಿ ನೌಕರರಾಗಿದ್ದು ಇವರ ಮೇಲೆ ಸಧ್ಯ ದೂರು ದಾಖಲಾಗಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.