ಹುಬ್ಬಳ್ಳಿ –
ಹುಬ್ಬಳ್ಳಿಯ ಪಗಡಿ ಓಣಿಯ ಒಳಚರಂಡಿ ಕಾಮಗಾರಿ ವೇಳೆ ನೀರಿಗೆ ಬಿದ್ದ ಜಾನುವಾರುಗಳು ಪರದಾಡುತ್ತಿವೆ ಒದ್ದಾಡುತ್ತಿವೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಡಿದ ಎಡವಟ್ಟಿನಿಂದಾಗಿ ಕಾಮಗಾರಿ ಆರಂಭವಾದಾಗಿನಿಂದ ಈವರೆಗೆ ಸಾಕಷ್ಟು ಪ್ರಮಾಣದಲ್ಲಿ ಜಾನುವಾರುಗಳು ಬಿದ್ದು ಬಿದ್ದು ಒದ್ದಾಡುತ್ತಿವೆ

ಕಳೆದ 15 ದಿನಗಳಿಂದ ಈ ಒಂದು ಕಾಮಗಾರಿ ಏನೋ ನಡೆಯುತ್ತಿದೆ ಆದರೆ ನಡೆಯುತ್ತಿರುವ ಈ ಒಂದು ಕಾಮಗಾರಿ ತುಂಬಾ ನಿಧಾನವಾಗಿ ಮತ್ತು ನಿರ್ಲಕ್ಷ್ಯ ದಿಂದ ನಡೆಯುತ್ತಿದೆ.

ಅಪೂರ್ಣಗೊಂಡ ಕಾಮಗಾರಿ ಸ್ಥಳದಲ್ಲಿ ಆಕಳು ಮತ್ತು ಆಕಳು ಕರುಗಳು ಒಂದರ ಮೇಲೊಂದರಂತೆ ಬೀಳುತ್ತಿವೆ. ಆಳಕ್ಕೆ ಬಿದ್ದು ಒದ್ದಾಡುತ್ತಿವೆ ಆದರೂ ಇವುಗಳ ನರಕಯಾತನೆ ಯಾರಿಗೂ ಕಾಣಿಸುತ್ತಿಲ್ಲ ಕೇಳಿಸುತ್ತಿಲ್ಲ

ಪ್ರತಿದಿನ ಇಲ್ಲಿ ಜಾನುವಾರಗಳು ತೆಗ್ಗಿಗೆ ಬೀಳೊದು ಏಳೊದು ಸರ್ವೆ ಸಾಮಾನ್ಯವಾಗಿದೆ.ಬೆಳಿಗ್ಗೆಯಿಂದ ಎರಡು ಗಂಟೆಗಳ ಕಾಲ ಒಳಚರಂಡಿ ಒಳಗೆ ಬಿದ್ದ ಆಕಳು, ಕರು ಒದ್ದಾಡಿದ್ದೊ ಒದ್ದಾಡಿದ್ದು

ಸ್ಥಳೀಯರೇ ಅರ್ಧ ಗಂಟೆಗಳ ಕಾಲ ಶ್ರಮ ವಹಿಸಿ ಸುರಕ್ಷಿತವಾಗಿ ಮೇಲಕ್ಕೆ ಎತ್ತಿರುವ ಚಿತ್ರಣ ಸ್ಥಳದಲ್ಲೇ ಕಂಡು ಬಂದಿತು ಇನ್ನೂ ಆಳದಲ್ಲಿ ಬಿದ್ದ ಇವುಗಳನ್ನು ಮೇಲಕ್ಕೆ ಎತ್ತುವಾಗ ಮತ್ತೊಂದು ಆಕಳು ಬಂದು ಹಾಯುತ್ತಿರುವ ಚಿತ್ರಣ ಸ್ಥಳದಲ್ಲಿ ಕಂಡು ಬಂದಿತು

ನಿನ್ನೆ ಇದೇ ಕಾಮಗಾರಿ ಮಹಿಳೋರ್ವಳು ಸಹ ಬಿದ್ದು ಗಾಯಗೊಂಡಿದ್ದರು.ಇಂದು ಜಾನುವಾರು ಗಳು ಒಂದೊಂದಾಗಿ ಬೀಳುತ್ತಿವೆ ಇನ್ನೂ ಪಾಲಿಕೆಯ ಈ ಒಂದು ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.